ಅಡ್ಡೂರು: ಅಡ್ಡೂರು ಇದರ 34 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಆ. 22 ರಂದು ಶನಿವಾರ ಬೆಳ್ಳಿಗೆ 9 ಗಂಟೆಗೆ ವಿಗ್ನೇಶ್ವರನ ಪ್ರತಿಷ್ಠಾಪನೆ ನಡೆಯಿತು. 11 ಗಂಟೆಗೆ ಗಣಹೋಮ 12.30 ಕೆ ಮಹಾಪೂಜೆ ನೆರವೇರಿತು.
ಪೊಳಲಿ ಶ್ರೀ ರಾಜರಾಜೇಶ್ಜೆವರೀ ದೇವಸ್ಥಾನದ ಪ್ರ. ಅರ್ಚಕ ಮಾಧವ ಭಟ್ ಪೂಜೆ ನೆರವೇರಿಸದರು. ಬೆಳಿಗ್ಗೆ 9.30ರಿಂದ 3.30ರ ವರೆಗೆ ಭಜನಾ ಕಾರ್ಯಕ್ರಮ ನಡೆಯಿತು. ಸಮಿತಿಯ ಅಧ್ಯಕ್ಷ ಹಾಗೂ ಸದಸ್ಯರು ಉಪಸ್ಥಿತರಿದ್ದರು.
