ಕುಪ್ಪೆಪದವು: ಫಲ್ಗುಣಿ ಯುವಕ ಮಂಡಲ (ರಿ ) ಇರುವೈಲು ಇದರ ವತಿಯಿಂದ 33 ನೇ ವರ್ಷದ ಉಚಿತ ಹಣ್ಣಿನ ಸಸಿ ವಿತರಣಾ ಕಾರ್ಯಕ್ರಮವು ಆದಿತ್ಯವಾರ ಸರಳವಾಗಿ ನಡೆಯಿತು. ಬಿ.ಸಿ.ರೋಡು ವಲಯದ ಸಹಾಯಕ ಅಂಚೆ ಪಾಲಕರಾದ ದಿನೇಶ್ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇರುವೈಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾಂತಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುವಕ ಮಂಡಲದ ಅಧ್ಯಕ್ಷ ನಿತಿನ್ ಸಫಲಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಸದಸ್ಯರಾದ ಶುಭಕರ್ ಸಾಲ್ಯಾನ್ ಸ್ವಾಗತಿಸಿ, ಮನೋಹರ್ ನಾಯ್ಕ್ ವಂದಿಸಿದರು. ವಿಶ್ವನಾಥ್ ದೇವಾಡಿಗರವರು ಕಾರ್ಯಕ್ರಮ ನಿರೂಪಿಸಿದರು.
