ಬಂಟ್ವಾಳ:ತಾಲೂಕಿನ ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ವಿಭಾಗದಿಂದ ಡಾ.ಎಸ್ .ಆರ್ .ರಂಗನಾಥನ್ ರವರ ಜನ್ಮ ದಿನದ ಪ್ರಯುಕ್ತ ಗ್ರಂಥಾಲಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸೌಮ್ಯ ಹೆಚ್.ಕೆ. ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕಗಳ ಜೊತೆಗೆ ವಾರ್ತಾ ಪತ್ರಿಕೆಗಳು, ನಿಯತಕಾಲಿಕೆಗಳನ್ನು ಓದುವುದರಿಂದ ಜ್ಞಾನ ವೃದ್ಧಿಸುತ್ತದೆ ಎಂದರು.
ಗ್ರಂಥಪಾಲಕರಾದ ಡಾ.ಶ್ರೀನಿವಾಸ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕರಾದ ನಸೀಮಾ ಬೇಗಂ,ಎಸ್, ಹನುಮಂತಯ್ಯ ಜಿ.ಹೆಚ್, ವಿನಯ್ ಎಂ.ಎಸ್, ದೇವಿಪ್ರಸಾದ್, ಕಛೇರಿ ಸಿಬ್ಬಂದಿಗಳಾದ ಪ್ರತಿಭಾ ಶೆಟ್ಟಿ, ದಕ್ಷಿತ್, ಸುಶ್ಮಿತ ಉಪಸ್ಥಿತರಿದ್ದರು.

