ಗುರುಪುರ : ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಪೇಟೆ ಮತ್ತು ಬಾಮಿ ಶಾಲೆಯ ಮಧ್ಯೆ ಹೆದ್ದಾರಿ ಬದಿಯಲ್ಲಿ ಭಾರೀ ಗುಡ್ಡ ಕುಸಿತ ಉಂಟಾಗಿದ್ದು, ಮರಗಳ ಸಹಿತ ಉರುಳಿದ ಬೃಹತ್ ಬಂಡೆಯೊಂದು ಹೆದ್ದಾರಿಯತ್ತ ಮುಖ ಮಾಡಿದೆ.19vp bande kusitha

ಇತ್ತೀಚೆಗೆ ಸುರಿದ ಧಾರಾಕಾರ ಗಾಳಿ-ಮಳೆಗೆ ಹೆದ್ದಾರಿ ಪಕ್ಕದ ಗುಡ್ಡದ ಮಣ್ಣಿನೊಂದಿಗೆ ಉರುಳಿದ ಈ ಬಂಡೆ ನೇರವಾಗಿ ಹೆದ್ದಾರಿಗೆ ಬೀಳುವ ಸಾಧ್ಯತೆ ಇದೆ. ಒಂದೊಮ್ಮೆ ಬಂಡೆ ಉರುಳಿದರೆ ಹೆದ್ದಾರಿ ವಾಹನ ಸಂಚಾರ ತಾಸುಗಟ್ಟಲೆ ಸ್ಥಗಿತಗೊಳ್ಳಲಿದೆ. ಕಳೆದ ವಾರ ಗುಡ್ದದ ಒಂದು ಮರ ಹಾಗೂ ಕೆಲವು ಮರಗಳ ರೆಂಬೆ-ಕೊಂಬೆಗಳು ಹೆದ್ದಾರಿಗೆ ಬಿದ್ದಿದ್ದವು. ಸಾರ್ವಜನಿಕರಿಂದ ಮರ ತೆರವಿನ ವೇಳೆ ಹೆದ್ದಾರಿಯಲ್ಲಿ ಒಂದು ತಾಸು ವಾಹನ ಸಂಚಾರ ಸ್ಥಗಿತಗೊಂಡಿತ್ತು.

“ಜೆಸಿಬಿ ಬಳಸಿ ಖಾಲಿ ಜಾಗಕ್ಕೆ ಈ ಬಂಡೆ ಸರಿಸಿದರೆ ಅಪಾಯ ತಪ್ಪಿಸಬಹುದು. ಇಲ್ಲವಾದರೆ ಮತ್ತೊಂದು ಬಾರಿ ಹೆದ್ದಾರಿ ವಾಹನ ಸಂಚಾರಕ್ಕೆ ಅಡಚಣೆಯಾಗಲಿದೆ” ಎಂದು ಗುರುಪುರ ನಾಗರಿಕರೊಬ್ಬರು ಹೇಳಿದರು.

By Suddi9

Leave a Reply

Your email address will not be published. Required fields are marked *