ಬಂಟ್ವಾಳ:ದಕ್ಷಿಣ ಕನ್ನಡ ಜಿಲ್ಲಾ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ ಇದರ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಅರ್ಚಕ ಮತ್ತು ಪುರೋಹಿತರ ಸಮಾನಮನಸ್ಕರ ಸಮಾಲೋಚನ ಸಭಾ ಜಿಲ್ಲಾಧ್ಯಕ್ಷರಾದ ಪಿ. ಕೃಷ್ಣರಾಜ ಭಟ್ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡಿನ    ಬ್ರಾಹ್ಮಣ ಪರಿಷತ್ ಕಟ್ಟಡದಲ್ಲಿ ಮಂಗಳವಾರ ನಡೆಯಿತು.IMG-20200817-WA0099

ಸಭೆಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕೆ ಸೂರ್ಯನಾರಾಯಣ ಭಟ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಗಿರಿ ಪ್ರಕಾಶ್ ತಂತ್ರಿ ಪೊಳಲಿ ,ಬಂಟ್ವಾಳ ಬ್ರಾಹ್ಮಣ ಪರಿಷತ್ ನ ಅಧ್ಯಕ್ಷ ,ನ್ಯಾಯವಾದಿ ರಮೇಶ್ಉಪಾಧ್ಯಾಯ, ಜಿಲ್ಲಾ ಕಾರ್ಯದರ್ಶಿ ರಘು ಹೊಳ್ಳ, ಪ್ರಮುಖರಾದ ಶಿವಾನಂದ ಮಯ್ಯ ,ಪದ್ಮನಾಭಕಾರಂತ, ಪದ್ಮನಾಭ ಆಚಾರ್ , ವೆಂಕಪ್ಪಯ್ಯ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಡಿಮೆ ಆದಾಯ ಇರುವ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರಿಗೆ ಸರಕಾರದಿಂದ ಸಿಗುವಂತ ಪರಿಹಾರದ  ಸಹಾಯಧನವನ್ನು ಒದಗಿಸಿಕೊಡುವಲ್ಲಿ ಸಂಘಟಿತ ಪ್ರಯತ್ನ ಮಾಡುವಂತೆ ಸಜೀಪ ಮಾಗಣೆ ತಂತ್ರಿಗಳಾದ ಎನ್. ಸುಬ್ರಹ್ಮಣ್ಯ ಭಟ್ ಜಿಲ್ಲಾ ಮತ್ತು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರ ಗಮನಸೆಳೆದರು. ಮುಂದಿನ ದಿನಗಳಲ್ಲಿ ಬಂಟ್ವಾಳ ತಾಲೂಕು ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರುಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಯಿತು.

By Suddi9

Leave a Reply

Your email address will not be published. Required fields are marked *