ಬಂಟ್ವಾಳ: ಬಿ.ಜೆ.ಪಿ.ಪಕ್ಷವು ವಿಶ್ವದಲ್ಲಿಯೇ ಅತೀ ಹೆಚ್ಚಿನ ಸದಸ್ಯರನ್ನು ಹೊಂದಿರುವ ಏಕೈಕ ಪಕ್ಷವಾಗಿದ್ದು, ಕಾರ್ಯಕರ್ತರು ಸೇರಿದಂತೆ ಪಕ್ಷದ ಪ್ರಮುಖರು ಒಗ್ಗಟ್ಟಿನಲ್ಲಿ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯನ್ನು ಎದುರಿಸಿ ಪಕ್ಷದ ವತಿಯಿಂದ ಸ್ಪರ್ಧೆಯಲ್ಲಿ ಇರುವ ಅಭ್ಯರ್ಥಿಗಳ ಗೆಲುವಿಗೆ ಶೃಮಿಸಬೇಕು ಎಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕಗಷ ದೇವಪ್ಪ ಪೂಜಾರಿ ಹೇಳಿದ್ದಾರೆ.
ರವಿವಾರ ಬಂಟ್ವಾಳ ತಾ.ನ ವಾಮದಪದವು ಶ್ರೀಗಣೇಶ ಮಂದಿರದಲ್ಲಿ ನಡೆದ ಬಿ.ಜೆ.ಪಿ. ಸಂಗಬೆಟ್ಟು ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತಾನಾಡಿದ ಅವರು,ಕ್ಷೇತ್ರದಅಭಿವೃದ್ಧಿ ದೃಷ್ಟಿಯಿಂದ ಶಾಸಕ ರಾಜೇಶ್ ನಾಯ್ಕ್,ಉಳಿಪಾಡಿಯವರು ಹಲವು ಕಾಮಗಾರಿಗಳಿಗೆ ಸಂಬಂಧಿಸಿದಂತೆ ನೂರಾರು ಕೋಟಿ ಅನುದಾನವನ್ನು ತಂದು ಮಾದರಿ ಬಂಟ್ವಾಳ ಕ್ಷೇತ್ರ ಮಾಡುವಲ್ಲಿ ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮತಾನಾಡಿದ ಕ್ಷೇತ್ರ ಬಿ.ಜೆ.ಪಿ.ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಪಕ್ಷದಲ್ಲಿ ಶಿಸ್ತು ,ಸಿದ್ದಾಂತ, ರಾಷ್ಟ್ರೀಯ ವಿಚಾರಧಾರೆ ಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಹಿರಿಯ-ಕಿರಿಯ ರನ್ನು ಸಮನಾಗಿ ನೋಡಿಕೊಂಡು ಬರಲಾಗುತ್ತಿದೆ ಎಂದರು.ಮಾಜಿ ಪ್ರಧಾನಿ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಯವರ ಪುಣ್ಯ ದಿನದ ಸ್ಮರಣೆ ಮಾಡುವ ಜೊತೆಯಲ್ಲಿಪಕ್ಷಕ್ಕಾಗಿ ಸೇವೆ ಸಲ್ಲಿಸಿ ಇತ್ತೀಚಿಗೆ ನಿಧನರಾದ ದಂಡೆ ಕೃಷ್ಣ ಶೆಟ್ಟಿ ಮತ್ತು ದಿವಾಕರ ಶೆಟ್ಟಿ ಅರಳ ಇವರನ್ನು ಸ್ಮರಿಸಿ ಶೃದ್ದಾಂಜಲಿ ಅರ್ಪಿಸಲಾಯಿತು.
ವೇದಿಕೆಯಲ್ಲಿ ಕ್ಷೇತ್ರ ಬಿ.ಜೆ.ಪಿ.ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಉಪಸ್ಥಿತರಿದ್ದರು.
ಸಂಗಬೆಟ್ಟು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸೀತರಾಮ ಪೂಜಾರಿ ಸ್ವಾಗತಿಸಿದರು.ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ,ತಾಪಂ ಸದಸ್ಯ ಪ್ರಭಾಕರ ಪ್ರಭು ವಂದಿಸಿದರು.
