ಮಂಗಳೂರು:ಕೊರೋನ ಬಗ್ಗೆ ತಪ್ಪು ಕಲ್ಪನೆ ಬೇಡ,ಯಾರೂ ಅನಗತ್ಯವಾಗಿ  ಪಡುವ ಅಗತ್ಯವಿಲ್ಲ. ಜನರಿಗೆ ಭಯ ಹುಟ್ಟಿಸುವ ಬದಲು, ಧೈರ್ಯ ತುಂಬುವ ಕೆಲಸವಾಗಬೇಕು, ಎಂದು ಯುವ ಸ್ಪಂದನದ ಯುವ ಪರಿವರ್ತಕರಾದ ದಿವ್ಯಾ ಪೂಜಾರಿ ಅವರು ಹೇಳಿದರು.c461239e-29e0-40e1-bbf4-571f8276e562

ಬಂಟ್ವಾಳದ ಪಾಂಡವರಕಲ್ಲು ಹಾಲು ಉತ್ಪಾದಕರ ಸಂಘದಲ್ಲಿ ನಡೆದ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಏರ್ಪಡಿಸಿದ್ದ ಯುವ ಸ್ಪಂದನದ‌ ಅರಿವು ಮತ್ತು ಕೊರೋನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಕೊರೊನಾಗೆ ಜನರು ಅನಗತ್ಯ ಭಯ ಪಡುವ ಸ್ಥಿತಿ ಇದೆ, ಆದರೆ ಭಯ ಪಡುವ ಬದಲು ಸುರಕ್ಷತೆಗೆ ಆದ್ಯತೆ ನೀಡಿದರೆ , ಅದು ನಮಗೆ ಬಾಧಿಸುವ ಸಾಧ್ಯತೆ ತೀರಾ ಕಡಿಮೆ. ಮುಖ್ಯವಾಗಿ ಸರ್ಕಾರದ ನಿರ್ದೇಶನಗಳನ್ನು ಸರಿಯಾಗಿ ಪಾಲಿಸೋಣ. ಎಲ್ಲರೂ ಧನಾತ್ಮಕವಾಗಿ ಯೋಚಿಸಿ, ಮಾನಸಿಕವಾಗಿ ಸಧೃಢರಾಗಬೇಕು ಎಂದರು.
ಯುವ ಸ್ಪಂದನದ ಮೂಲಕ ಯುವ ಜನರಿಗೆ ನಿರಂತರವಾಗಿ ಅರಿವು ಕಾರ್ಯಕ್ರಮಗಳನ್ನು ನಡೆಸುತ್ತಿರುವ ಬಗ್ಗೆ ವಿವರಿಸಿದರು.

ಪಾಂಡವರಕಲ್ಲು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಶ್ರೀ ಕಮಲಾಕ್ಷ ಉಪಸ್ಥಿತರಿದ್ದರು. ಸಂಘದ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು

By suddi9

Leave a Reply

Your email address will not be published. Required fields are marked *