ಕೈಕಂಬ: ಮುತ್ತೂರು ಗ್ರಾಮಪಂಚಾಯತ್  ಕುಳವೂರು ಗ್ರಾಮದ ಕದ್ರಾಡಿ ಎಂಬಲ್ಲಿ ಕಟ್ಟಿರುವ ಕಿಂಡಿ ಆಣೆ ಕಟ್ಟಿನ ಬಳಿ ಭಾರೀ ಮಳೆಗೆ ತೋಡಿನ ಒಂದು ಭಾಗ ಕುಸಿದಿದ್ದು ಕೃಷಿ ಭೂಮಿಗೆ ಹಾನಿಯಾಗಿದೆ.ಸಣ್ಣ ನೀರಾವರಿ ಇಲಾಖೆ ನಿರ್ಮಿಸಿರುವ ಈ ಆಣೆಕಟ್ಟಿನ ಮೇಲ್ಭಾಗದ ಉದ್ದಕ್ಕೆ ಕೇವಲ ಮೂರು ಮೀಟರ್ ಉದ್ದ ತಡೆಗೋಡೆ ಕಟ್ಟಲಾಗಿದೆ ಆದರೆ ಇಲ್ಲಿ ತೋಡಿನ ಬದಿ ಮಳೆ ನೀರಿನ  ಸೆಳೆತಕ್ಕೆ ಕುಸಿಯುವ ಸಾಧ್ಯತೆ ಇದ್ದು ಇಪ್ಪತ್ತೈದು ಮೀಟರ್ ಉದ್ದಕ್ಕೆ ತಡೆಗೋಡೆ ನಿರ್ಮಿಸಬೇಕೆಂದು  ಕೃಷಿಕರು ಒತ್ತಾಯಿಸಿದ್ದರು.20200809_125437
ಇದೀಗ ತಡೆಗೋಡೆಯಿಂದ ಮೇಲಕ್ಕೆ ಕುಸಿತವಾಗಿದ್ದು ತೆಂಗಿನ ಮರ ಉರುಳುವ ಸ್ಟಿಯಲ್ಲಿದೆ.  ಕಳೆದ ಮೂರು ವರ್ಷಗಳಿಂದ ಇಲ್ಲಿ ತಡೆಗೋಡೆ ನಿರ್ಮಿಸುವಂತೆ ಸಣ್ಣ ನೀರಾವರಿ ಇಲಾಖೆಗೆ ಮನವಿ ನೀಡಿ ಒತ್ತಾಯಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೃಷಿಕ, ಜಿಲ್ಲಾ ರೈತ ಮುಖಂಡ ಪುನ್ಕೆದಡಿ ದಯಾನಂದ ಶೆಟ್ಟಿ ದೂರಿದ್ದಾರೆ.

By Suddi9

Leave a Reply

Your email address will not be published. Required fields are marked *