ಬಂಟ್ವಾಳ : ಬಂಟ್ವಾಳ ತಾಲೂಕು ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ವತಿಯಿಂದ ಇರ್ವತ್ತೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರಿಗೆ ಮಹಾತ್ಮ ಗಾಂ„ ಉದ್ಯೋಗ ಖಾತರಿ ಯೋಜನೆ ಬಗ್ಗೆ ಮಾಹಿತಿ ಕಾರ್ಯಕ್ರಮ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಶ್ರೀ ಸತ್ಯನಾರಾಯಣ ಸಭಾಂಗಣದಲ್ಲಿ ಆ.6 ರಂದು ಜರಗಿತು.

0708pkt1
ಪಿಲಾತ್ತಬೆಟ್ಟು ವ್ಯ.ಸೇ. ಸಹಕಾರಿ ಸಂಘದ ಹಿರಿಯ ನಿರ್ದೇಶಕ ಬೂಬ ಸಪಲ್ಯಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣ ಉಡುಪ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಲ್ಲಿ ಮುಕ್ತ ಅವಕಾಶವಿದ್ದು, ಜನ ಸಾಮಾನ್ಯರಿಗೆ ಮಾಹಿತಿ ಕೊರತೆಯ ಕಾರಣ ಇಂತಹ ಶಿಬಿರಗಳನ್ನು ನಡೆಸಲಾಗುತ್ತಿದೆ. ಗ್ರಾಮಸ್ಥರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಇರ್ವತ್ತೂರು ಪಂ.ಅ.ಅ„ಕಾರಿ ಅವಿನಾಶ್ ಬಿ.ಆರ್. ಅವರು ಉದ್ಯೋಗ ಖಾತರಿ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಇರ್ವತ್ತೂರು ಗ್ರಾ.ಪಂ. ನಿಕಟಪೂರ್ವ ಸದಸ್ಯರಾದ ದಯಾನಂದ ಕುಲಾಲ್, ಪ್ರಶಾಂತ್ ಕೋಟ್ಯಾನ್, ಸು„ೀಂದ್ರ ಶೆಟ್ಟಿ, ಮಾಲತಿ, ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ನಿರ್ದೇಶಕರಾದ ಸಂತೋಷ್ ಕುಮಾರ್ ಕುಂಟಜಾಲು, ದಿನೇಶ್ ಕುಲಾಲ್, ಶಿವಯ್ಯ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ ಅವರು ಸ್ವಾಗತಿಸಿ, ವಂದಿಸಿದರು.

By suddi9

Leave a Reply

Your email address will not be published. Required fields are marked *