ಗುರುಪುರ : ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆದ ಪ್ರಯುಕ್ತ ಗುರುಪುರ ಶ್ರೀ ಜಂಗಮ ಮಠದಲ್ಲಿ ಉತ್ತರ ಮಂಡಲ ಯುವ ಮೋರ್ಚಾ ವತಿಯಿಂದ ಗುರುಪುರ ಮಹಾಶಕ್ತಿ ಕೇಂದ್ರದ ಮುಂದಾಳತ್ವದಲ್ಲಿ ಶ್ರೀ ರಾಮಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿಂದೆ ಅಯೋಧ್ಯೆಯಲ್ಲಿ ನಡೆದಿದ್ದ ಕರಸೇವೆಯಲ್ಲಿ ಗುರುಪುರದಿಂದ ಪಾಲ್ಗೊಂಡಿದ್ದ ಪುರಂದರ ಮಲ್ಲಿ, ರಮಾನಂದ ಶೆಟ್ಟಿ, ಹರೀಶ್ ಶೆಟ್ಟಿ ಏತಮೊಗರುಗುತ್ತು, ರವಿ ಶೆಟ್ಟಿಗಾರ ಗುರುಪುರ, ಯೋಗೀಶ್ ಆಚಾರ್ಯ, ರಾಜೇಂದ್ರ ನಾಯಕ್, ಕುಮಾರಚಂದ್ರ ಶೆಟ್ಟಿ ಅವರನ್ನು ಮಠದ ಶ್ರೀ ರುದ್ರಮುನಿ ಮಹಾಸ್ವಾಮಿ ಶಾಲು ಹಾಕಿ ಸನ್ಮಾನಿಸಿದರು.
ಉತ್ತರ ಮಂಡಲದ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ, ಉಪಾಧ್ಯಕ್ಷೆ ಅಮೃತಲಾಲ್ ಡಿ’ಸೋಜ, ಮಹಾಶಕ್ತಿ ಕೇಂದ್ರದ ಅಧ್ಯಕ್ಷಸೋಹನ್ ಅಥಿಕಾರಿ, ಯುವ ಮೋರ್ಚಾ ಉಪಾಧ್ಯಕ್ಷ ಸಂದೇಶ್ ಜಿ ಕೆ, ಉಪಾಧ್ಯಕ್ಷ ಸೋಮಯ್ಯ, ಥಾಮಸ್ ಕೈಕಂಬ, ತಮ್ಮಯ್ಯ ಪೂಜಾರಿ ಮಳಲಿ, ರಾಜೇಶ್ ಸುವರ್ಣ ಗುರುಪುರ, ಶ್ರೀಕರ ಶೆಟ್ಟಿ, ಮಾಧವ ಕಾಜಿಲ ಮತ್ತಿತರರು ಉಪಸ್ಥಿತರಿದ್ದರು. ಭೂಮಿಪೂಜೆ ನಿಮಿತ್ತ ಮಠದ ಆವರಣದಲ್ಲಿ ಸಸಿಯೊಂದು ನೆಡಲಾಯಿತು.



