ಗುರುಪುರ : ಗುರುಪುರ ಗ್ರಾಮ ಪಂಚಾಯತ್‍ನ ಸಭಾಗೃಹದಲ್ಲಿ ಆ. 4ರಂದು ಸಂಜೆ ಪಂಚಾಯತ್ ಅಧಿಕಾರಾವಧಿಯ ಕೊನೆಯ ಸಾಮಾನ್ಯಸಭೆ ಹಾಗೂ ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊನೆಯದಾಗಿ ಗುರುಪುರ ಗ್ರಾಮ ಪಂಚಾಯತ್ ಬುಧವಾರ ತನ್ನ ಐದು ವರ್ಷದ ಅಧಿಕಾರಾವಧಿ ಮುಗಿಸಿತು.

ಸಾಮಾನ್ಯ ಸಭೆ :gur-aug-5-sabhe-3

ಸಭೆಯಲ್ಲಿ ಪಂಚಾಯತ್‍ನ ಮೂಳೂರು ಮತ್ತು ಅಡ್ಡೂರು ಗ್ರಾಮದಲ್ಲಿ ಕಟ್ಟಡ ಕಾಮಗಾರಿ ಮತ್ತು ವ್ಯಾಪಾರ ಪರವಾನಿಗೆ ನೀಡಲಾದ ಬಗ್ಗೆ ಮಾಹಿತಿ ಒದಗಿಸಲಾಯಿತು. ಇತ್ತೀಚೆಗೆ ಮಠದಗುಡ್ಡೆ ಸೈಟಿನಲ್ಲಿ ಸಂಭವಿಸಿದ ಗುಡ್ಡೆ ಕುಸಿತ ಮತ್ತು ಮನೆ ಸ್ಥಳಾಂತರಗೊಂಡವರಿಗೆ ತಿಂಗಳ ಬಾಡಿಗೆ ಹಾಗೂ ನಿವೇಶನ ಗುರುತಿಸುವಿಕೆ, ಅಡ್ಡೂರು ಗ್ರಾಮದಲ್ಲಿ ಮರ ಕಡಿಯುವ, ಕ್ರಿಯಾ ಯೋಜನೆಯಲ್ಲಿ ಹಂಚಿಕೆಯಾದ ಅನುದಾನ ಲಭ್ಯವಾಗದ ಕುರಿತು ಸದಸ್ಯರು ಪ್ರತ್ಯೇಕವಾಗಿ ಗಮನಸೆಳೆದರು.

gur-aug-5-chandrakala sanmana-2

ಅಧಿಕಾರಿಗಳಿಗೆ ಸನ್ಮಾನ :

ಗುರುಪುರ ಗ್ರಾಮ ಪಂಚಾಯತ್‍ನ ಪಿಡಿಒಗೆ ವರ್ಗಾವಣೆ ಆದೇಶ ಬಂದಿದ್ದರೂ, ಸದ್ಯ ಪಂಚಾಯತ್‍ನಲ್ಲೇ ಹಂಗಾಮಿಯಾಗಿ ಕರ್ತವ್ಯ ಮುಂದುವರಿಸಿರುವ ಅಬೂಬಕ್ಕರ್ ಹಾಗೂ ಕೆಲವು ಸಮಯದ ಹಿಂದೆ ಪದೋನ್ನತಿಗೊಂಡು ತುಂಬೆ ಗ್ರಾಮ ಪಂಚಾಯತ್‍ಗೆ ಲೆಕ್ಕ ಸಹಾಯಕಿಯಾಗಿ ವರ್ಗಾವಣೆಗೊಂಡಿರುವ ಚಂದ್ರಕಲಾರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಇದೇ ವೇಳೆ ಪಂಚಾಯತ್‍ನ ಸರ್ವ ಸದಸ್ಯರು ಹಾಗೂ ಸಿಬ್ಬಂದಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

gur-aug-5-sabhe-1

ಸನ್ಮಾನದ ಮುಂದಾಳತ್ವ ವಹಿಸಿದ್ದ ಜಿಪಂ ಸದಸ್ಯ ಯು ಪಿ ಇಬ್ರಾಹಿಂ ಮಾತನಾಡಿ, ಗುರುಪುರ ಗ್ರಾಪಂ ಅಧಿಕಾರಕ್ಕೆ ಬಂದಿದ್ದ ಅಂದಿನ ಸನ್ನಿವೇಶ ಹಾಗೂ ಇಂದಿನ ಪ್ರಶಸ್ತ ವಾತಾವರಣ ನೋಡುವಾಗ, ಎಲ್ಲರ ಸಹಕಾರ ಇದ್ದುದರಿಂದ ಈ ಪಂಚಾಯತ್ ದೇಶದಲ್ಲೇ ಹೆಸರು ಮಾಡುವಂತಾಯಿತು ಎಂದರು.ಸನ್ಮಾನಕ್ಕುತ್ತರವಾಗಿ ಮಾತನಾಡಿದ ಪಿಡಿಒ ಅಬೂಬಕ್ಕರ್, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಪಂಚಾಯತ್ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು, ಜಿಪಂ ಸದಸ್ಯ, ತಾಪಂ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉತ್ತಮ ಕೆಲಸ ಮಾಡಿದ್ದಾರೆ.

gur-aug-5-chandrakala-3 ಕೇಂದ್ರ ಸರ್ಕಾರದಿಂದ(ಜಿಪಿಡಿಪಿ) ಗುರುಪುರ ಗ್ರಾಪಂ ದೇಶದಲ್ಲೇ ಅತ್ಯುತ್ತಮ ಪಂಚಾಯತ್ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಕ್ಷಣ ಮರೆಯಲಾರೆ ಎಂದರು.ಚಂದ್ರಕಲಾರು ಎಲ್ಲರ ಸಹಕಾರ ಸ್ಮರಿಸಿದರೆ, ಉಪಾಧ್ಯಕ್ಷ ಜಿ ಎಂ ಉದಯ ಭಟ್ ಮಾತನಾಡಿ, “ಐದು ವರ್ಷದ ಅಧಿಕಾರವಧಿ ತೃಪ್ತಿಕೊಟ್ಟಿದೆ. ರಾಜಕೀಯಲ್ಲಿ ತಾಳ್ಮೆ ಮತ್ತು ವಿಷಯ ಪರಾಮರ್ಶಿಸಿ ಮುನ್ನಡೆಯುವ ಬಗೆ ಕಲಿತೆ” ಎಂದರು.ಪಂಚಾಯತ್ ಅಧ್ಯಕ್ಷೆ ರುಕಿಯಾ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಸಚಿನ್ ಅಡಪ, ಕಾರ್ಯದರ್ಶಿ ಅಶೋಕ್ ಹಾಗೂ ಸದಸ್ಯರು, ಸಿಬ್ಬಂದಿ ಇದ್ದರು.

By Suddi9

Leave a Reply

Your email address will not be published. Required fields are marked *