ಬಂಟ್ವಾಳ: ಒಂದುವಾರದ ಕಾಲ ವಿಧಿಸಲಾಗಿದ್ದ ಗುರುವಾರ ಮುಂಜಾನೆ ಲಾಕ್ ಕಳಚಿದ  ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಲ್ಲು ಸಹಜಸ್ಥಿತಿಗೆ ಮರಳಿದೆ.  ಬಂಟ್ವಾಳ ತಾಲೂಕಿನಲ್ಲು ಕೊರೋನ ಪ್ರಕರಣ ಹೆಚ್ಚುತ್ತಲೇ ಇದ್ದು , ವಾರದ ಕಾಲ ವಿಧಿಸಲಾಗಿದ್ದ ಲಾಕ್ ಡೌನ್ ಗುರುವಾರ ಬೆಳಗ್ಗಿನ ಜಾವ ತೆರವಾದ ಬೆನ್ನಲ್ಲೆ ಜನಜೀವನ ಸಹಜಸ್ಥಿತಿ ಶುರುವಾಗಿದೆ. ಬೆಳಗ್ಗಿನಿಂದಲೇ ಅಂಗಡಿ ಮುಂಗಟ್ಟು ತೆರೆದು  ಚಟುವಟಿಕೆಯಿಂದ ಕೂಡಿತ್ತು. IMG-20200723-WA0029

ಜನಸಂಚಾರ,ವಾಹನ ಸಂಚಾರವು ಕಂಡುಬಂತು. ವಾರದ ಕಾಲ ನಿಲುಗಡೆಯಾಗಿದ್ದ ಗ್ರಾಮೀಣ ಭಾಗಕ್ಕೆ ಸಂಚರಿಸುತ್ತಿದ್ದ ಖಾಸಗಿ  ಮತ್ತು ಸಿಸಿ ಬಸ್ ಗಳು ಬೆರಳೆಣಿಕೆಯಲ್ಲಿ ಸಂಚಾರವನ್ನು ಆರಂಭಿಸಿತು ಹಾಗೆಯೇ ಪುತ್ತೂರು,ಧರ್ಮಸ್ಥಳ ರೂಟಿನಲ್ಲು ಈ ಹಿಂದಿನಂತೆ ನಿಗದಿತ ಬಸ್ ಗಳು ರಸ್ತೆಗಿಳಿದಿವೆ.ಆದರೆ ಬಸ್ ಗಳಲ್ಲಿ ಪ್ರಯಾಣಿಕರ ಕೊರತೆ ಮಾತ್ರ ಕಾಣುತಿತ್ತು.  ಆಟೋ ರಿಕ್ಷಾ,ಟೂರಿಸ್ಟ್ ಕಾರು,ವ್ಯಾನ್  ಸಹಿತ ವಿವಿಧ ಬಾಡಿಗೆ ವಾಹನಗಳು ಕೂಡ ಈ ಹಿಂದಿನಂತೆ ಸಂಚಾರ ಆರಂಭಿಸಿದೆ.  ಒಂದು ವಾರದ ಕಾಲ ಮನೆಯಲ್ಲೇ ಕುಳಿತಿದ್ದ ಜನರು ಕೂಡ ತಮ್ಮ ಅಗತ್ಯದ ಕೆಲಸಕ್ಕಾಗಿ ಮತ್ತು ಸಾಮಾಗ್ರಿ ಖರೀದಿಗೆ ಪೇಟೆಯತ್ತ ಹೆಜ್ಜೆ ಹಾಕಿದ್ದಾರೆ.IMG-20200723-WA0065

ಜನಸಂಚಾರವಿಲ್ಲದೆ ಒಂದು ವಾರ ಬಿಕೋ ಎನಿಸಿದ ಬಿ.ಸಿ.ರೋಡಿನ ಮಿನಿವಿಧಾನಸೌಧ ಚಟುವಟಿಕೆಯಿಂದ ಕೂಡಿತ್ತು.  ತಮ್ಮ ಅಗತ್ಯದ ಕೆಲಸಕ್ಕಾಗಿ ಜನರು ಮಿನಿವಿಧಾನಸೌಧದ ಮುಂದೆ ಸರತಿಯಲ್ಲಿ ನಿಂತು ಒಳಪ್ರವೇಶಿಸಿದರು.ಇಲ್ಲಿಗಾಗಮಿಸಿದ ಎಲ್ಲರನ್ನು ಪ್ರವೇಶದ್ವಾರದಲ್ಲಿ  ಥರ್ಮಲ್ ಸ್ಕ್ರೀನ್ ಮಾಡಿ ವಿವರ ಪಡೆದು ಬಳಿಕ ಆಯಾಯ ವಿಭಾಗಕ್ಕೆ ಕಳುಹಿಸಿಕೊಡಲಾಗುತಿತ್ತು. ಪುರಸಭೆ, ತಾಪಂ ಕಚೇರಿ ಸಹಿತ ಎಲ್ಲಾ ಸರಕಾರಿ ಕಚೇರಿಗಳು ತೆರೆದಿದ್ದು,ಸಾರ್ವಜನಿಕರ ಪ್ತವೇಶಕ್ಕೆ ಅನುಕೂಲ ಮಾಡಿಕೊಡಲಾಗಿತ್ತಾದರೂ ,ಇಲ್ಲಿ ಅನಗತ್ಯ ತಿರುಗಾಟಕ್ಕೆ ಮಾತ್ರ ಅವಕಾಶವಿರಲಿಲ್ಲ.IMG-20200723-WA0066

ವಾರದ ಲಾಕ್ ಡೌನ್ ನಿಂದ 11 ಗಂಟೆಯ ಬಳಿಕ ಪ್ರತಿನಿತ್ಯ ಚಟುವಟಿಕೆಯಲ್ಲಿದ್ದ ಬಂಟ್ವಾಳ,ಬಿ.ಸಿ.ರೋಡ್,ಮೆಲ್ಕಾರ್,ಕಲ್ಲಡ್ಕ ಮೊದಲಾದ ನಗರ ಪ್ರದೇಶಗಳು ಬಿಕೋ ಅನಿಸುತಿತ್ತು.ಗುರುವಾರ ಲಾಕ್ ಡೌನ್ ತೆರವಾದ ಬೆನ್ನಲ್ಲೆ ಸಹಜಸ್ಥಿತಿಯತ್ತ ಮರಳುತ್ತಿದೆ.ಈ ಬಂಟ್ವಾಳ ತಾಲೂಕಿನಲ್ಲು ಪ್ರತಿದಿನ ಎರಡಂಕೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣವು ದಾಖಲಾಗುತ್ತಿದೆ.ಈಗಾಗಲೇ ತಾಲೂಕಿನಲ್ಲಿ 100ಕ್ಕು ಅಧಿಕ ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು,ಮಾಜಿಕೇಂದ್ರ ಸಚಿವ ಜನಾರ್ದನ ಪೂಜಾರಿ,ಬಂಟ್ವಾಳ ನಗರ ಯೋಜನಾ ಪ್ರಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ ಸಹಿತ ಹಲವಾರು ಮಂದಿ ಗುಣಮುಖರಾಗಿ ಕೊರೋನ ವಿರುದ್ದ ಗೆದ್ದು ಬಂದಿದ್ದಾರೆ.

By suddi9

Leave a Reply

Your email address will not be published. Required fields are marked *