ಬಂಟ್ವಾಳ: ಮೂಡ ಗ್ರಾಮದ ಮೊಡಂಕಾಪ್ ಕಾರ್ಮೇಲ್ ಕಾಲೇಜು ಬಳಿಯ ರಸ್ತೆಯಲ್ಲಿ ನೂರಾರು ಜನ ಸಂಚರಿಸುವ ಮಣ್ಣಿನ ರಸ್ತೆಯು ತೀರ ಹದಗೆಟ್ಟಿದ್ದು ಜನರು ಮಳೆಗಾಲದಲ್ಲಿ ನಡೆದಾಡಲು ಕೆಸರುಮಯಗೊಂಡ ರಸ್ತೆ ಇದಾಗಿದ್ದು . ಇಲ್ಲಿಯ ನಾಗರಿಕರು ಸರಿಪಡಿಸಲು ಹಲಾವಾರು ಭಾರಿ ಜನಪ್ರತಿನಿಧಿಗಳಿಗೆ ಮನವಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ.
ಇದರಿಂದ ಬೇಸತ್ತ ಸ್ಥಳೀಯ ಜನರು ಲಾಕ್ ಡೌನ್ ಸಮಯದಲ್ಲಿ 100ಮೀಟರ್ ಉದ್ದದ ರಸ್ತೆಯನ್ನು ಸ್ತಳೀಯರೇ ಸೇರಿ ಸುಮಾರು 50 ಸಾವಿರ ರೂ ವೆಚ್ಚದಲ್ಲಿ ರಸ್ತೆಗೆ ಕೆಂಪು ಕಲ್ಲು ಹಾಸಿ ಯೋಗ್ಯವಾದ ರಸ್ತೆಯನ್ನಾಗಿ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ವಿಘ್ಣೇಶ್ ಮೆಡಿಕಲ್ ಮಾಲಕ ಕಿರಣ್ ಅವರ ಮುತುರ್ವರ್ಜಿಯಲ್ಲಿ ಜನಾರ್ಧನಹೊಳ್ಳ,ಇಂಜಿನೀಯರ್ ಕಿರಣ್ ಗೌಡ, ಎಡ್ವಕೇಟ್ ಯಶವಂತ ಇವರು ಕೈಜೋಡಿಸಿದ್ದಾರೆ.
