ಬಂಟ್ವಾಳ: ದ.ಕ.ಜಿಲ್ಲಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಲ್ಲಿಯು ಬಂದ್ ಯಶಸ್ವಿಯಾಗಿದೆ.ಬೆಳಗ್ಗಿನ ಹೊತ್ತು ಕೊಂಚ ಜನಸಂಚಾರ ಕಂಡುಬಂದರೂ,ಹೊತ್ತು ಮೀರುತ್ತಿದ್ದಂತೆ ಜನ,ವಾಹನ ಸಂಚಾರ ಸ್ಥಗಿತಗೊಂಡು ಪೇಟೆ ಪ್ರದೇಶಗಳು ಬಿಕೋ ಎನ್ನುತ್ತಿತ್ತು.

IMG_20200716_163831
ಬಿ.ಸಿ.ರೋಡು ಹಾಗೂ ಬಂಟ್ವಾಳ ಪೇಟೆಯಲ್ಲಿ ೧೧ ಗಂಟೆಯ ವರೆಗೆ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದು, ಒಂದಷ್ಟು ಮಂದಿ ಸಾಮಾಗ್ರಿ,ತರಕಾರಿ ಖರೀದಿಸುವ ದೃಶ್ಯ ಕಂಡುಬಂತು. ಮೂಡಬಿದ್ರೆ,ಸರಪಾಡಿ,ಮುಡಿಪು,ಪೊಳಲಿ  ಮೊದಲಾದ ಕಡೆಗಳಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಗಳು,ಬಾಡಿಗೆ ವಾಹನಗಳು ಸಂಚಾರವನ್ನು ಸಂಪೂರ್ಣ ಸ್ಥಗಿತ ಗೊಳಿಸಿತ್ತು.ಬೆರಳೆಣಿಕೆ ಆಟೋ ರಿಕ್ಷಾಗಳು 11 ಗಂಟೆಯವರೆಗೆ ಬಾಡಿಗೆ ಮಾಡಿದ್ದು,ಬಳಿಕ ಅವುಗಳು ಕೂಡ ಸಂಚಾರ ನಿಲ್ಲಿದವು.  ಬ್ಯಾಂಕ್, ಸಹಕಾರಿ ಸಂಘಗಳು, ಮೆಡಿಕಲ್‌ಗಳು ಓಪನ್ ಆಗಿದ್ದವು.ಬಂಟ್ವಾಳದಲ್ಲಿ ಮೂರು ಪಡಿತರ ಅಂಗಡಿಗಳು ತೆರೆದಿದ್ದು,11 ಗಂಟೆಯವರೆಗೆ ಪಡಿತರ ವಿತರಣೆ ಮಾಡಿದ್ದರು. ಜನರು ಸ್ವಂತ ವಾಹನಗಳ ಮೂಲಕ ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿಸಿದರು.

ಉಳಿದಂತೆ ತಾಲೂಕಿನ ಎಲ್ಲ ಗ್ರಾಮೀಣ  ಭಾಗಗಳಲ್ಲೂ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಸರಕಾರಿ ಕಚೇರಿಗಳು ತೆರೆದಿದ್ದರೂ, ಸಾರ್ವಜನಿಕರು ಯಾರೂ ಇರಲಿಲ್ಲ. ಮಧ್ಯಾಹ್ನದವರೆಗೆ ಮಳೆಯ ಕೊಂಚ ಕಡಿಮೆ ಇತ್ತು.ಮಧ್ಯಾಹ್ನದ ನಂತರ ಜಡಿಮಳೆ ಶುರುವಾಗಿತ್ತು.

By suddi9

Leave a Reply

Your email address will not be published. Required fields are marked *