ಮಂಗಳೂರು: ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಆರಂಭಿಸಲು ಉದ್ದೇಶಿರುವ ಪತ್ರಕರ್ತರ ಗೃಹ ನಿರ್ಮಾಣ ಸಹಕಾರಿ ಸಂಘದ ಸ್ಥಾಪನೆಗೆ ಸಂಬಂಧಿಸಿ ಸದಸ್ಯತ್ವ ಮತ್ತು  ಷೇರು ಹಣ ಸಂಗ್ರಹಿಸಲು  ಸಹಕಾರ ಉಪ ನಿಬಂಧಕರು ಅನುಮತಿ ನೀಡಿದ್ದಾರೆ.

ಉದ್ದೇಶಿತ  ಪತ್ರಕರ್ತರ ಗೃಹ ನಿರ್ಮಾಣ ಸಹಕಾರಿ ಸಂಘ(ನಿ)  ಸ್ಥಾಪನೆಗೆ  ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು,ಸಹಕಾರಿ ಸಂಘದ ಸದಸ್ಯರಾಗಿ
ಷೇರು ಖರೀದಿಸಿ  ನಮ್ಮೊಂದಿಗೆ  ಕೈಜೋಡಿಸಬೇಕಾಗಿದೆ. ಪ್ರತಿಯೊಂದು ಷೇರಿನ ಮುಖಬೆಲೆ 1 ,000 ರೂ. ಪ್ರವೇಶ ಧನ 100 ರೂ. ಷೇರು ಶುಲ್ಕ 100 ರೂ.
ಸದಸ್ಯರು ಕನಿಷ್ಠ 2 ಕ್ಕಿಂತ ಹೆಚ್ಚು ಷೇರು ಖರೀದಿಸಿ ಸಹಕಾರಿ ಸಂಘದ ಸ್ಥಾಪನೆಗೆ ಸಹಕರಿಸಬೇಕಾಗಿ ವಿನಂತಿ. ವಿಶೇಷ ಸೂಚನೆ
*ಸದಸ್ಯತ್ವ ಹಾಗೂ ಷೇರು ಪಡೆಯಲು   ಅರ್ಜಿ ಸಲ್ಲಿಸುವಾಗ ಸದಸ್ಯರು ಆಧಾರ್ ಕಾರ್ಡ್ ಪ್ರತಿ  1 ಮತ್ತು ಇತ್ತೀಚಿನ ಭಾವಚಿತ್ರ 3ನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು.

*ನಿಗದಿತ ಅರ್ಜಿ ಫಾರಂ  ಪತ್ರಿಕಾ ಭವನದಲ್ಲಿರುವ ಸಂಘದ ಕಚೇರಿಯಲ್ಲಿ ಲಭ್ಯ ವಿದೆ. *ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 25, 2020 ರೊಳಗೆ ಸಲ್ಲಿಸಬೇಕು ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತಿಳಿಸಿದ್ದಾರೆ.

ಶ್ರೀ ನಿವಾಸ ನಾಯಕ್
ಮುಖ್ಯ ಪ್ರವರ್ತಕರು

By suddi9

Leave a Reply

Your email address will not be published. Required fields are marked *