ಶ್ರೀನಿವಾಸಪುರ: ಸಮಾಜದಲ್ಲಿ ನಾವು ಸಂಪಾದಿಸಿದ್ದನ್ನು ಕೊನೆಯಲ್ಲಿ ಹೊತ್ತುಕೊಂಡು ಹೋಗುವುದು ಏನೂ ಇಲ್ಲ, ನಮ್ಮ ಕೈಲಾದಷ್ಟು ಸಮಾಜಕ್ಕೆ ಒಳಿತಾಗುವ ಸೇವೆಯನ್ನು ಮಾಡುವುದೆ ರೋಟರಿ ಧ್ಯೇಯವಾಗಿದೆ ಎಂದು ನೂತನ ಅಧ್ಯಕ್ಷರಾದ ಎಸ್. ಶಿವಮೂರ್ತಿ ತಿಳಿಸಿದರು.SVS_0887

ಪಟ್ಟಣದಲ್ಲಿ 2020-21ನೇ ಸಾಲಿನ ರೋಟರಿ ಶ್ರೀನಿವಾಸಪುರ ಸೆಂಟ್ರಲ್ ವತಿಯಿಂದ ನೂತನ ಪದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಂಡು, ಅಧ್ಯಕ್ಷರ ಪದವಿಯನ್ನು ಸ್ವೀಕರಿಸಿ ಮಾತನಾಡಿದ ಶಿವಮೂರ್ತಿ, ರೋಟರಿ ಶ್ರೀನಿವಾಸಪುರ ಸೆಂಟ್ರಲ್ ವತಿಯಿಂದ ಬಹಳಷ್ಟು ಸೇವೆ ಮಾಡಬೇಕೆಂಬ ಹಂಬಲ ಹೊಂದಿದ್ದು, ಬಡ ಶಾಲಾ ಮಕ್ಕಳಿಗೆ ಪುಸ್ತಕ, ಲೇಖನ ಸಾಮಗ್ರಿ, ಟೆಕ್ನಾಲಜಿಗೆ ತಕ್ಕಂತೆ ಅವಶ್ಯಕತೆ ಇರುವ ವಸ್ತುಗಳನ್ನು ನೀಡುವುದು, ಆರೋಗ್ಯಕ್ಕೆ ತಕ್ಕಂತೆ ಆರೋಗ್ಯ ಶಿಭಿರಗಳನ್ನು ನಡೆಸಲಾಗುವುದು ಎಂದರು.

ರಾಜಕಾರಣ ಯಾವುದೆ ಇರಲಿ, ರೋಟರಿ ಸಂಸ್ಥೆಯೊಳಗಡೆ ಬಂದಾಗ ಸೇವಾ ದೃಷ್ಟಿಯಿಂದ ನೋಡೋಣ, ಈ ಬಾರಿ ನೂತನವಾಗಿ ಆಯ್ಕೆ ಮಾಡಿರುವ ಎಲ್ಲಾ ಸದಸ್ಯರೂ ಯುವಕರಾಗಿದ್ದು, ಎಲ್ಲರೂ ಒಗ್ಗಟ್ಟಾಗಿ ತಾಲ್ಲೂಕಿನ ಒಳಿತಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ ಎಂದರು. ಕೈಲಾದವರಿಗೆ, ದುರ್ಬಲರಿಗೆ ಸಹಾಯ ಮಾಡೋಣ, ಒಳ್ಳೆ ವಿಧ್ಯೆ ಪಡೆದು ಸೌಲಭ್ಯ ವಂಚಿತರಾಗಿರುವಂತಹವರಿಗೆ ಅನುಕೂಲ ಮಾಡಿಕೊಡೋಣ, ಸಮಾಜದಿಂದ ನಾವು ಅಪೇಕ್ಷಿಸದೆ, ನಾವೇ ಸಮಾಜಕ್ಕೆ ಕೊಡುಗೆ ನೀಡೋಣ, ಪ್ರತಿಯೊಬ್ಬ ನಾಗರೀಕರು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು, ತಮ್ಮ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ ಎಂದು ತಿಳಿಸಿದರು.

ನೂತನ ಸದಸ್ಯರಿಗೆ ಪಿನ್ ತೊಡಿಸಿ ಸ್ವಾಗತ ಕೋರಲಾಯಿತು. ಇದೆ ಸಂದರ್ಭದಲ್ಲಿ ಪಟ್ಟಣದ ಪೊಲೀಸ್ ಕ್ವಾರ್ಟಸ್ ಕೌಂಪೌಂಡ್ ಸುತ್ತಲೂ ವಿವಿಧ ಬಗೆಯ 100 ಸಸಿಗಳನ್ನು ನಾಟಿ ಮಾಡಲು ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸೆಪೆಕ್ಟರ್ ವಿಠಲ್ ತಲವಾರ್ ರವರು ಸಸಿ ನಾಟಿ ಮಾಡುವ ಮೂಲಕ ಚಾಲನೆ ನೀಡಲಾಯಿತು.

ಇದೆ ಸಂದರ್ಭದಲ್ಲಿ 3190 ಜಿಲ್ಲಾಕಾರ್ಯದರ್ಶಿ ನಾರಾಯಣಮೂರ್ತಿ, ಎ.ಜಿ. ಗೋಪಾಲರೆಡ್ಡಿ, ಜಂ ಜಂಟಿ ಕಾರ್ಯದರ್ಶಿ ಅ.ಮು. ಲಕ್ಷ್ಮೀನಾರಾಯಣ ಮಾತನಾಡಿದರು.

ಈ ಸಂದರ್ಭದಲ್ಲಿ ಜಿ.ಎಸ್.ಆರ್. ಎಸ್.ವಿ. ಸುಧಾಕರ್, ಚಾರ್ಟ್‍ಡ್ ಪ್ರೆಸೆಡೆಂಟ್ ಎಲ್. ಗೋಪಾಲಕೃಷ್ಣ, ನೂತನ ಕಾರ್ಯದರ್ಶಿ ಹೆಚ್. ನಾಗೇಶ್, ನಿರ್ಗಮಿತ ಅಧ್ಯಕ್ಷ ಆರ್.ವಿ. ಕುಲಕರ್ಣಿ, ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ, ನೂತನ ಖಜಾಂಜಿ ಎಸ್.ಎನ್. ಮಂಜುನಾಥರೆಡ್ಡಿ, ಬೈರೇಗೌಡ, ಹಾಲಿ ಮತ್ತು ನೂತನ ಸದಸ್ಯರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *