ಶ್ರೀನಿವಾಸಪುರ: ಸರ್ಕಾರಿ ನೌಕರರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪದವೀಧರೇತರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್‌ ಹೇಳಿದರು.2..............
  ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ, ಜಿಲ್ಲಾ ಪದವೀಧರೇತರ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಂಗವಾದಿ ನಾಗರಾಜ್‌ ಅವರನ್ನು ಸನ್ಮಾನಿಸಿ ಮಾತನಾಡಿ, ಪದವೀಧರೇತರ ಸರ್ಕಾರಿ ನೌಕರರು ತಮ್ಮದೇ ಆದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
  ವಿವಿಧ ಸರ್ಕಾರಿ ನೌಕರರ ಸಂಘಟನೆಗಳ ಮುಖ್ಯಸ್ಥರಾದ ಕೆ.ಎಚ್‌.ಸಂಪತ್‌ ಕುಮಾರ್‌, ಆರ್‌.ಶ್ರೀನಿವಾಸ್‌, ಕೆ.ರಾಜಣ್ಣ, ಟಿ.ಆಂಜಪ್ಪ, ಚಿನ್ನಪ್ಪ, ರೆಡ್ಡಪ್ಪ, ವೆಂಕಟರವಣ, ಕೆ.ವೇಣುಗೋಪಾಲ್‌, ರವೀಂದ್ರ ಸಿಂಗ್‌, ಕೆ.ಎಂ.ವೆಂಕಟರಾಮಪ್ಪ, ಸಾದಿಕ್‌, ಮುಖಂಡ ಕೆ.ಕೆ.ಮಂಜು ಇದ್ದರು.

By suddi9

Leave a Reply

Your email address will not be published. Required fields are marked *