ತುಮಕೂರು: ಇಂದು ವೆಲ್ಫೇರ್ ಪಾರ್ಟಿ ತುಮಕೂರು ಜಿಲ್ಲಾ ಘಟಕದ ವತಿಯಿಂದ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ರಾಜ್ಯಾಧ್ಯಕ್ಷರಾದ ಅಡ್ವಕೇಟ್ ತಾಹೆರ್ ಹುಸೇನ್ ರವರು ಮಾತನಾಡಿದರು. ಮೋದಿ 2.0 ಸರಕಾರದ ಮೊದಲ ವರ್ಷದ ವೈಫಲ್ಯ, ಬಿಹಾರದ ಚುನಾವಣೆಗೆ Digital Rally ಮೂಲಕ ಸಿದ್ದತೆ , ವಿದ್ಯುಚ್ಛಕ್ತಿ ಖಾಸಗೀಕರಣ ಮಾಡುವ ಹುನ್ನಾರ, ದೇಶದ ಪದವೀಧರರಲ್ಲಿ 60 ಶೇಕಡಾ ಮಂದಿ ನಿರುದ್ಯೋಗಿಗಳು, ಲಾಕ್ ಡೌನ್ ನಲ್ಲಿ 12 ಕೋಟಿ ಜನ ನಿರುದ್ಯೋಗಿಗಳಾದ ಬಗ್ಗೆ ವಿವರಿಸಿದರು.
ರಾಜ್ಯದಲ್ಲಿ ಗ್ರಾಮಪಂಚಾಯತ್ ಗಳಿಗೆ ಆಡಳಿತ ಸಮಿತಿಯನ್ನು ನೇಮಿಸುವ ಸರಕಾರದ ಇಂಗಿತವನ್ನು ವಿರೋಧಿಸಿದರು.IMG_20200611_201021
ಸರಕಾರವು ಒಂದು ವೇಳೆ ಗ್ರಾಮ ಪಂಚಾಯತ್ ಗಳಿಗೆ ಆಡಳಿತ  ಸಮಿತಿ ನೇಮಿಸಿದರೆ ಹೈಕೋರ್ಟ್ ಮೆಟ್ಟಲೇರಲಾಗುವುದೆಂದು ಎಚ್ಚರಿಸಿದರು. ಪಕ್ಷದ ಜಿಲ್ಲಾಧ್ಯಕ್ಷರಾದ ತಾಜುದ್ದೀನ್ ತುಮಕೂರು ಅವರು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಸಮನ್ವಯದ ಕೊರತೆಯಿಂದಾಗಿ ಕ್ವಾರೆಂಟೈನ್ ನಲ್ಲಿರುವವರಿಗೆ ಬಹಳಷ್ಟು ತೊಂದರೆಗಳಾಗುತ್ತಿದೆಯೆಂದು ಆರೋಪಿಸಿದರು. ಮುಂಬರುವ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಜಿಲ್ಲಾದ್ಯಂತ ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದೆಂದು ಹೇಳಿದರು.IMG-20200611-WA0005
ಸುದ್ದಿಗೋಷ್ಟಿಯಲ್ಲಿ ರಾಜ್ಯ ಕಾರ್ಯದರ್ಶಿ ಮೊಯಿನ್ ಖಮರ್, ರಾಜ್ಯ ಮಾಧ್ಯಮ ಕಾರ್ಯದರ್ಶಿ ಅಝೀಝ್ ಜಾಗೀರ್ ದಾರ್ ಮತ್ತು ತುಮಕೂರು ಜಿಲ್ಲಾ ಆಸಿಫುಲ್ಲಾ ಖಾನ್, ಜಿಲ್ಲಾ ಕಾರ್ಯದರ್ಶಿ ಅಫ್ಜಲ್ ಖಾನ್ ಮತ್ತು ಇತರ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸನ್ಮಾನ:
ಕೊರೋನ ವಾರಿಯರ್ ಆಗಿ ಅಹರ್ನಿಶಿ ದುಡಿದ ಝಹೀರುದ್ದೀನ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

By suddi9

Leave a Reply

Your email address will not be published. Required fields are marked *