ರಾಯಲ್ಪಾಡು : ರಾಯಲ್ಪಾಡು ಹೋಬಳಿಯ ಚಿಲ್ಲೋರಪಲ್ಲಿ ಗ್ರಾಮದ ಸ್ಮಶಾನಕ್ಕೆ ಸಂಬಂದಿಸಿದಂತೆ ಸರ್ವೆ ನಂ 17ರ 3ಎಕರೆ 2ಗುಂಟೆಯಲ್ಲಿ 1ಎಕರೆ ಒತ್ತುವರಿಯಾಗಿರುವ ಬಗ್ಗೆ ಗ್ರಾಮದ ಮುಖಂಡ ವೆಂಕಟರಮಣಾರೆಡ್ಡಿ ಹಾಗು ಗ್ರಾಮಸ್ಥರು ದೂರನ್ನು ನೀಡಿರುವ ಹಿನ್ನೆಲೆ ಮಂಗಳವಾರ ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಸ್ಥಳಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲಿಸಿದರು.IMG_20200603_185357

ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಗ್ರಾಮಸ್ಥರೊಂದಿಗೆ ಹಾಗು ಸ್ಥಳೀಯ ಅಧಿಕಾರಿಗಳೊಂದಿಗೆ ಮಾತನಾಡಿ ಸ್ಮಶಾನಕ್ಕೆ ಸಂಬಂದಿಸಿದ ಜಾಗವನ್ನು ಅತೀ ಶೀಘ್ರವಾಗಿ ಸರ್ವೆ ಮಾಡಿಸಿ ಒತ್ತುವಾರಿ ಜಾಗವನ್ನು ಸ್ವಾದೀನಪಡಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಉಪತಹಶೀಲ್ದಾರ್ ಬಲರಾಮಯ್ಯ, ಪಿಡಿಒ ರಾಮಚಂದ್ರಪ್ಪ, ವಿಎ ನಂದಪ್ಪ ಇದ್ದರು.

By suddi9

Leave a Reply

Your email address will not be published. Required fields are marked *