ಕೋಲಾರ: ಸ್ವ ಉದ್ಯೋಗ ಸೃಷ್ಟಿಗೆ ಪೂರಕವಾದ ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಂಡರೆ ಜಿಲ್ಲೆಯ ಯುವ ಸಮೂಹಕ್ಕೆ ಅನುಕೂಲವಾಗುತ್ತದೆಎಂದು ಜಿ.ಪಂ ಸಿಇಓ ಹೆಚ್.ವಿ ದರ್ಶನ್ ಸಲಹೆ ನೀಡಿದರು.ನಗರ ಹೊರವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿನಡೆದ ಡಿ.ಎಲ್.ಆರ್.ಎ.ಸಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ತರಬೇತಿಗಳನ್ನು ಹಮ್ಮಿಕೊಂಡಿರೆ, ಜಿಲ್ಲೆಯ ಯುವ ಸಮೂಹ ಸ್ವ ಉದ್ಯೋಗ ಆರಂಭಿಸಿ, ಸ್ವಾವಲಂಭಿಗಳಾಗಲು ಸಾಧ್ಯವಾಗಲಿದ್ದು, ಈ ಬಗ್ಗೆ ತರಬೇತಿ ಸಂಸ್ಥೆ ಗಮನಹರಿಸುವಂತೆ ಸೂಚಿಸಿದರು.
ಕೆಲ ಯೋಜನೆಗಳಿಂದ ಜಿಲ್ಲೆಯ ಕೆರೆಗಳಿಗೆ ನೀರು ಬರುತ್ತಿರುವುದರಿಂದ ಕೆರೆಗಳು ತುಂಬುತ್ತಿವೆ. ಈ ಸಂದರ್ಭದಲ್ಲಿ ಮೋಟಾರ್ ರಿವೈಂಡಿಂಗ್ ಮತ್ತು ಪಂಪ್ ಸೆಟ್ ರಿಪೇರಿ ತರಬೇತಿ ಹಮ್ಮಿಕೊಂಡರೆ ಹಲವರಿಗೆ ಉದ್ಯೋಗವಕಾಶ ಸಿಗಲಿದೆ. ಹಾಗೆಯೇ ಗ್ರಾಮೀಣ ಭಾಗದಲ್ಲಿನ ಶುದ್ದ ಕುಡಿಯುವ ನೀರಿನ ಘಟಕಗಳ ರಿಪೇರಿ ಮಾಡಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕ ಸತ್ಯನಾರಾಯಣ ಮಾತನಾಡಿ, ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಗಳು ಯುವ ಸಮೂಹದ ಅಭಿವೃದ್ದಿಗೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.
ಇದೇ ವೇಳೆ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಸಿದ್ದಪಡಿಸಿದ್ದ ಜಿಲ್ಲಾ ಸಾಲ ಯೋಜನೆ 2020-21 ಸಾಲಿನ ಕೈಪಿಡಿಯನ್ನು ಸಿ.ಇ.ಓ ಬಿಡುಗಡೆ ಮಾಡಿದರು.ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಡಿವಿಜನಲ್ ಮ್ಯಾನೇಜರ್ ವರುಣಾ ವಿ ಎಸ್, ಎಸ್.ಬಿ.ಐ ಬ್ಯಾಂಕ್ ನ ಪ್ರಾದೇಶಿಕ ವ್ಯವಸ್ಥಾಪಕ ಪಿ.ಕೆ ರಾಮಮೂರ್ತಿ,ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಬಿ.ಐ ಹೊಸಮಠ್, ವ್ಯವಸ್ಥಾಪಕ ಅಂಬಾಜಿ ನವಲೆ, ಕರ್ನಾಟಕ ಬ್ಯಾಂಕ್ ನ ವ್ಯವಸ್ಥಾಪಕ ಸುರೇಶ್ ಹೆಚ್.ಜಿ, ಸಂಸ್ಥೆಯ ನಿರ್ದೇಶಕ ರಮಾಕಾಂತ್ ಬಿ ಯಾದವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪೋಟೋ ಕ್ಯಾಪ್ಷನ್1: ಕೋಲಾರ ಹೊರವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಜಿ.ಪಂ ಸಿಇಓ ಹೆಚ್.ವಿ ದರ್ಶನ್ ವಹಿಸಿದ್ದರು.ಸಂಸ್ಥೆಯಲ್ಲಿನಡೆದ ಡಿ.ಎಲ್.ಆರ್.ಎ.ಸಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ತರಬೇತಿಗಳನ್ನು ಹಮ್ಮಿಕೊಂಡಿರೆ, ಜಿಲ್ಲೆಯ ಯುವ ಸಮೂಹ ಸ್ವ ಉದ್ಯೋಗ ಆರಂಭಿಸಿ, ಸ್ವಾವಲಂಭಿಗಳಾಗಲು ಸಾಧ್ಯವಾಗಲಿದ್ದು, ಈ ಬಗ್ಗೆ ತರಬೇತಿ ಸಂಸ್ಥೆ ಗಮನಹರಿಸುವಂತೆ ಸೂಚಿಸಿದರು.ಕೆಲ ಯೋಜನೆಗಳಿಂದ ಜಿಲ್ಲೆಯ ಕೆರೆಗಳಿಗೆ ನೀರು ಬರುತ್ತಿರುವುದರಿಂದ ಕೆರೆಗಳು ತುಂಬುತ್ತಿವೆ. ಈ ಸಂದರ್ಭದಲ್ಲಿ ಮೋಟಾರ್ ರಿವೈಂಡಿಂಗ್ ಮತ್ತು ಪಂಪ್ ಸೆಟ್ ರಿಪೇರಿ ತರಬೇತಿ ಹಮ್ಮಿಕೊಂಡರೆ ಹಲವರಿಗೆ ಉದ್ಯೋಗವಕಾಶ ಸಿಗಲಿದೆ. ಹಾಗೆಯೇ ಗ್ರಾಮೀಣ ಭಾಗದಲ್ಲಿನ ಶುದ್ದ ಕುಡಿಯುವ ನೀರಿನ ಘಟಕಗಳ ರಿಪೇರಿ ಮಾಡಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕ ಸತ್ಯನಾರಾಯಣ ಮಾತನಾಡಿ, ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಗಳು ಯುವ ಸಮೂಹದ ಅಭಿವೃದ್ದಿಗೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.ಇದೇ ವೇಳೆ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಸಿದ್ದಪಡಿಸಿದ್ದ ಜಿಲ್ಲಾ ಸಾಲ ಯೋಜನೆ 2020-21 ಸಾಲಿನ ಕೈಪಿಡಿಯನ್ನು ಸಿ.ಇ.ಓ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಡಿವಿಜನಲ್ ಮ್ಯಾನೇಜರ್ ವರುಣಾ ವಿ ಎಸ್, ಎಸ್.ಬಿ.ಐ ಬ್ಯಾಂಕ್ ನ ಪ್ರಾದೇಶಿಕ ವ್ಯವಸ್ಥಾಪಕ ಪಿ.ಕೆ ರಾಮಮೂರ್ತಿ,ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಬಿ.ಐ ಹೊಸಮಠ್, ವ್ಯವಸ್ಥಾಪಕ ಅಂಬಾಜಿ ನವಲೆ, ಕರ್ನಾಟಕ ಬ್ಯಾಂಕ್ ನ ವ್ಯವಸ್ಥಾಪಕ ಸುರೇಶ್ ಹೆಚ್.ಜಿ, ಸಂಸ್ಥೆಯ ನಿರ್ದೇಶಕ ರಮಾಕಾಂತ್ ಬಿ ಯಾದವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
