ಶ್ರೀನಿವಾಸಪುರ: ಎಪಿಎಂಸಿ ಮಾರುಕಟ್ಟೆಯಲ್ಲಿ ಮಾವು ವಹಿವಾಟು ನಡೆಸಲು ಅವಕಾಶ ಕೊಡಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಸೋಮವಾರ ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಅವರಿಗೆ ಮನವಿ ಪತ್ರ ಅರ್ಪಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಕಾರ್ಯದರ್ಶಿ ಎಸ್.ಜಿ.ವೀರಭದ್ರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ ಶೇ.25 ರಷ್ಟು ಫಸಲು ಬಂದಿದೆ. ಹೆಚ್ಚಾಗಿ ಬೆಳೆಯುವ ತೊತಾಪುರಿ ಜಾತಿಯ ಮಾವನ್ನು ಮಾವು ಸಂಸ್ಕರಣ ಘಟಕಗಳಿಗೆ ರವಾನಿಸಿದರೆ, ಉಳಿದ ಕಾಯಿಯನ್ನು ಬೆಂಗಳೂರಿನಲ್ಲಿ ನಿಗದಿಪಡಿಸಲಾಗಿರುವ ಸ್ಥಳಗಳಲ್ಲಿ ಮಾರಾಟ ಮಾಡಬಹುದಾಗಿದೆ ಎಂದು ಹೇಳಿದರು.
ಮುಖಂಡರಾದ ಬಿ.ನಾರಾಯಣಸ್ವಾಮಿ, ಎಂ.ಬೈರಾರೆಡ್ಡಿ, ಎನ್.ಜಿ.ಶ್ರೀರಾಮರೆಡ್ಡಿ, ಚಿನ್ನಪ್ಪರೆಡ್ಡಿ, ಸಿ.ವಿ.ದೇವರಾಜಗೌಡ, ಎಂ.ಶ್ರೀಧರ್, ವೀರೇಂದ್ರ ಪಾಟೀಲ್, ಆರ್.ಚಂದ್ರಶೇಖರರೆಡ್ಡಿ, ಈರಪ್ಪರೆಡ್ಡಿ, ಎನ್.ಬಿ.ನರಸಿಂಹಮೂರ್ತಿ, ರಾಜಣ್ಣ, ರಮೇಶ್ ಹೆಬ್ಬಟ ಇದ್ದರು.
ಶಬ್ಬೀರ್ ಅಹಮ್ಮದ್
