ಶ್ರೀನಿವಾಸಪುರ: ದೇಶದಿಂದ ಕೊರೋನಾವನ್ನು ಹೊಡೆದೋಡಿಸಲು ಪ್ರತಿಯೊಬ್ಬರೂ ಅಗತ್ಯ ನಿಯಮಗಳನ್ನು ತಪ್ಪದೆ ಪಾಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ವೈ.ಎ.ನಾರಾಯಣಸ್ವಾಮಿ ಹೇಳಿದರು.ಅವರು  ತಾಲ್ಲೂಕಿನ ರಾಯಲ್ಪಾಡು, ಗೌನಿಪಲ್ಲಿ ಗ್ರಾಮಗಳಲ್ಲಿ ವಿವಿಧ ಸಮುದಾಯಗಳ    ಬಡವರಿಗೆ 1000 ಆಹಾರ ಪದಾರ್ಥದ ಕಿಟ್‌ಗಳನ್ನು  ಬುಧವಾರ ವಿತರಿಸಿ ಮಾತನಾಡಿದರು. 1.......

ಕೊರೊನಾ ನಿರ್ಮೂಲನೆ ಇಂದಿನ ಪ್ರಮುಖ ಆದ್ಯತೆಯಾಗಿದೆ. ಈ ರೋಗಕ್ಕೆ ಔಷಧ ಇಲ್ಲದ ಕಾರಣ ಪ್ರತಿಯೊಬ್ಬರೂ ಕಡ್ಡಾಯವಾಗಿ ಅಂತರ ಪಾಲನೆ ಮಾಡಬೇಕು. ನಿಯಮಿತವಾಗಿ ಕೈ ತೊಳೆಯಬೇಕು ಹಾಗೂ ಮಾಸ್ಕ್‌ ಧರಿಸಬೇಕು ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಮಾತನಾಡಿ, ಬಿಜೆಪಿ ವತಿಯಿಂದ ಜಿಲ್ಲೆಯಾದ್ಯಂತ ಬಡವರಿಗೆ ಆಹಾರ ಪದಾರ್ಥ, ಮಾಸ್ಕ್‌ ವಿತರಿಸಲಾಗುತ್ತಿದೆ. ಯಾರಾದರೂ ಆರೋಗ್ಯ ಸಮಸ್ಯೆ ಇರುವುದಾಗಿ ದೂರವಾಣಿ ಮೂಲಕ ತಿಳಿಸಿದರೆ ಅಗತ್ಯ ಔಷಧಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಸಂಕಷ್ಟದ ಸಂದರ್ಭದಲ್ಲಿ ಮಾನವೀಯ ನೆರವು ನೀಡುವುದು ಪಕ್ಷದ ಉದ್ದೇಶವಾಗಿದೆ ಎಂದು ಹೇಳಿದರು.

ಮುಖಂಡರಾದ ಜಯರಾಮರೆಡ್ಡಿ. ಎಂ.ಲಕ್ಷ್ಮಣಗೌಡ, ಎಸ್‌.ಬಿ.ಮುನಿವೆಂಕಟಪ್ಪ, ಎ.ಅಶೋಕರೆಡ್ಡಿ, ಇ ಶಿವಣ್ಣ, ನಾಗರಾಜ್‌ ಇದ್ದರು.

By suddi9

Leave a Reply

Your email address will not be published. Required fields are marked *