ಮಂಗಳೂರು:ಲಾಕ್ ಡೌನ್ ಸಂದರ್ಭದಲ್ಲಿ ಬಡಜನರ ಕಷ್ಟಗಳನ್ನು ಅರಿತು ತನ್ನ ಕ್ಷೇತ್ರದೆಲ್ಲೆಡೆ ಸಂಚರಿಸಿ ಬಡತನ ಮತ್ತು ಮಧ್ಯಮ ವರ್ಗದ ಜನರ ಅವಶ್ಯಕತೆಗಳಿಗೆ ದಿನನಿತ್ಯ ಸ್ಪಂದಿಸುತ್ತಿರುವ ಭಾರತೀಯ ಜನತಾ ಪಾರ್ಟಿಯ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ  ಚಂದ್ರಹಾಸ್ ಪಂಡಿತ್ ಹೌಸ್ ಅವರು ಎರಡನೇ ಭಾರಿ ಆಶಾಕಾರ್ಯಕರ್ತೆಯರಿಗೆ ಸಹಾಯ ಹಸ್ತ ನೀಡಿದರು.fde18fd2-f470-4e79-9dee-c975c197cfee

ದಿನವಿಡೀ ಕಷ್ಟಪಟ್ಟು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕೊರೋನಾ ವಿರುದ್ಧ ಶ್ರಮಿಸುವ ಆಶಾ ಕಾರ್ಯಕರ್ತೆಯೆರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಳೆದ ವಾರ ಪೆರ್ಮನ್ನೂರು ವ್ಯಾಪ್ತಿಯ ಸುಮಾರು 10 ಜನ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಮತ್ತು ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ನೀಡಿದ್ದು,ಇದರ ಮುಂದುವರಿದ ಭಾಗವಾಗಿ ಇಂದು ಸೋಮೇಶ್ವರ ಗ್ರಾಮದ ಸುಮಾರು 14 ಜನ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ, ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ನೀಡಿ ಅಭಿನಂದಿಸಿದರು.

By suddi9

Leave a Reply

Your email address will not be published. Required fields are marked *