ಕೋಲಾರ: ರೈತರ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಿ ತೆಲಂಗಾಣ ರಾಜ್ಯದ ಮಾದರಿಯಲ್ಲಿ ಕೃಷಿ ಪ್ಯಾಕೇಜ್ ಘೋಷಣೆ ಮಾಡುವ ಜೊತೆಗೆ ಮುಂಗಾರು ಬಿತ್ತನೆಗೆ ಅಗತ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಉಚಿತವಾಗಿ ನೀಡಬೇಕೆಂದು ರೈತ ಸಂಘದಿಂದ ಕೃಷಿ ಸಚಿವರಾದ ಬಿ.ಸಿ ಪಾಟೀಲ್‍ರವರಿಗೆ ಮನವಿ ನೀಡಿ ಅಗ್ರಹಿಸಲಾಯಿತು.

Raitha sangha krushi minister manvi news 14-4-2020 (9)
ಮನವಿ ನೀಡಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಇಡೀ ದೇಶಕ್ಕೆ ತರಕಾರಿ ಕೊಡುವ ಕೋಲಾರ ಜಿಲ್ಲೆಯ ರೈತರ ಪರಿಸ್ಥಿತಿ ಕೊರೋನಾ ಹಾವಳಿಗೆ ತುತ್ತಾಗಿ ಸಮೃದ್ದವಾಗಿ ಬೆಳೆದಿರುವ ಸುಮಾರು 3ಸಾವಿರ ಎಕರೆ ಟೆಮೋಟೋ, 4ಸಾವಿರ ಎಕರೆ ಕ್ಯಾಪ್ಸಿಕಾಂ, 2 ಸಾವಿರ ಎಕರೆ ಹೂಕೋಸು, 2.5ಸಾವಿರ ಎಕರೆ ಹೂ ಬೆಳೆಗಳು ಸಮೃದ್ದವಾಗಿ ಬಂದಿದ್ದು, ಮಾರುಕಟ್ಟೆಯಲ್ಲಿ ಬೆಲೆಯಿಲ್ಲದ ಜೊತೆಗೆ ಹೊರ ರಾಜ್ಯಗಳಿಗೆ ಸಾಗಿಸಲು ಸಾದ್ಯವಾಗದೆ ತೋಟದಲ್ಲಿಯೇ ಸಂಪೂರ್ಣವಾಗಿ ನಾಶವಾಗಿ ಖಾಸಗಿ ಸಾಲಕ್ಕೆ ಸಿಲುಕಿದ್ದಾರೆ.

Raitha sangha krushi minister manvi news 14-4-2020 (7) ಅದರ ಜೊತೆಗೆ ಮತ್ತೆ ಬಂಡವಾಳ ಹಾಕಿ ಬೆಳೆ ಮಾಡಲು ಶಕ್ತನಲ್ಲದ ರೈತನಿಗೆ ಸ್ಪೂರ್ತಿ ತುಂಬಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಕಿಸಾನ್ ಸನ್ಮಾನ್ ಯೋಜನೆಯ ಹಣದ ಜೊತೆಗೆ ಹೆಚ್ಚುವರಿಯಾಗಿ 15 ಸಾವಿರ ಖಾತೆಗಳಿಗೆ ನೀಡುವ ಜೊತೆಗೆ ತೆಲಂಗಾಣ ಮಾದರಿಯಲ್ಲಿ ರೈತರಿಗೆ 35 ಸಾವಿರ ಕೋಟಿ ಪ್ಯಾಕೆಜ್ ಘೋಷಣೆ ಮಾಡಿ ರೈತರ ಬೆಳೆಗಳನ್ನು ತೋಟದಲ್ಲಿಯೆ ಸರ್ಕಾರ ಖರೀದಿ ಮಾಡುವ ಜೊತೆಗೆ ರೇಷ್ಮೇ, ಹೈನೋದ್ಯಮ , ಕೋಳಿ ಸಾಕಾಣಿಕೆ ರೈತರಿಗೆ ಬೆಂಬಲ ಬೆಲೆಯನ್ನು ನೀಡುವ ಜೊತೆಗೆ ಬಡ್ಡಿ ರಹಿತ ಸಾಲ ನೀಡಿ ಮುಂದಿನ ಭವಿಷ್ಯಕ್ಕಾಗಿ ರೈತರನ್ನು ಕಷ್ಟಕಾಲದಲ್ಲಿ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.Raitha sangha krushi minister manvi news 14-4-2020 (4)

ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ ಮಾತನಾಡಿ ಕೋರೋನಾ ಮಹಾಮರಿಯಿಂದ ಮುಂದಿನ ದಿನಗಳಲ್ಲಿ ಆಹಾರದ ಕೊರತೆಯಾಗಿ ಹಸಿವಿನಿಂದ ಜನರು ಸಾಯುತ್ತಾರೆ ಸರ್ಕಾರ ಇದರ ಬಗ್ಗೆ ಗಂಬೀರವಾಗಿ ಗಮನ ಹರಿಸಬೇಕು, ಮತ್ತು ರೈತರು ಸಾಗಿಸುವ ಉತ್ಪನ್ನಗಳಿಗೆ ಪಾಸ್ ತೊಂದರೆಯಾಗುತ್ತಿದೆ. ರೈತರು ಕಚೇರಿಯಿಂದ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಇದನ್ನು ನಿಲ್ಲಿಸಿ ಯಾವುದೇ ನಿರ್ಬಂದವಿಲ್ಲದೇ ಯಾವುದೇ ಒಂದೇ ಕಚೇರಿಯಲ್ಲಿ ಪಾಸ್ ವಿತರಣೆ ಮಾಡಬೇಕು, ಜೊತೆಗೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸರ್ಕಾರಕ್ಕೆ ಮಂಡಿ ಮಾಲೀಕರು ಕಟ್ಟುವ 1 ರೂ ಚೆಸ್ ಹಣವನ್ನು ಕೊರೋನಾ ವೈರಸ್ ಹಾವಳಿ ಮುಗಿಯುವವರೆಗೂ ಮುಂದೂಡುವ ಜೊತೆಗೆ ಹೈನೋದ್ಯಮ ಗ್ರಾಮೀಣ ಪ್ರದೇಶಗಳ ಲಕ್ಷಾಂತರ ಕುಟುಂಬಗಳ ಜೀವನಾಡಿಯಾಗಿದ್ದು, ವೈರಸ್ ಹಾವಳಿಯಿಂದ ಕೆಲಸ ಕಾರ್ಯಯಿಲ್ಲದೇ ಹೈನೋದ್ಯಮವೇ ಕುಟುಂಬಗಳ ನಿರ್ವಹಣೆ ಅಗಿರುವುದರಿಂದ ಸರ್ಕಾರ ಹಾಲು ಒಕ್ಕೂಟಕ್ಕೆ ಸೂಚನೆ ನೀಡಿ ಉಚಿತವಾಗಿ ಪಶು ಆಹಾರ ಮೇವನ್ನು ನೀಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.

Raitha sangha krushi minister manvi news 14-4-2020 (6)
ಮನವಿ ಸ್ವೀಕರಿಸಿ ಮಾತನಾಡಿದ ಕೃಷಿ ಬಿ,ಸಿ ಪಾಟೀಲ್ ರವರು ರೈತರು ಯಾವುದೇ ಸಮಸ್ಯೆಗೂ ಹೆದರಬೇಕಾಗಿಲ್ಲ, ನಿಮ್ಮ ರಕ್ಷಣೆ ಸರ್ಕಾರದ ಕರ್ತವ್ಯವಾಗಿದೆ. ಬೆಳೆಯ ಜೊತೆಗೆ ಉತ್ತಮ ಮಾರುಕಟ್ಟೆ ಒದಗಿಸುತ್ತೇವೆ. ಸಮಸ್ತ ರೈತ ಬಾಂಧವರು ಕೊರೋನಾ ತಡೆಗಟ್ಟಲು ಸಹಕರಿಸಬೇಕೆಂದು ಮನವಿ ಮಾಡುವ ಜೊತೆಗೆ ರೇಷ್ಮೇ, ಹೈನೋದ್ಯಮ, ಕೋಳಿ ಸಾಕಾಣಿಕೆ ರೈತರಿಗೂ ಸಹಕಾರ ನೀಡುವ ಭರವಸೆಯನ್ನು ನೀಡಿದರು.ಮನವಿ ನೀಡುವಾಗ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ಮುಂತಾದವರಿದ್ದರು.

By suddi9

Leave a Reply

Your email address will not be published. Required fields are marked *