ಮಂಗಳೂರು:ಕೊರೊನ ವೈರಸ್ ಸೋಂಕು ತಡೆಯಲು ದೇಶದ ಎಲ್ಲೆಡೆ ಲಾಕ್ ಡೌನ್ ಮಾಡಲಾಗಿದೆ .ಪ್ರಧಾನಿ ನರೇಂದ್ರ ಮೋದಿ ಅವರ ಮನವಿಗೆ ಇಡ ದೇಶವೇ ಸ್ಪಂದಿಸಿದೆ .ಲಾಕ್ ಡೌನ್ ನಿಂದ ತನ್ನ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ಹಿನ್ನಲೆಯಲ್ಲಿ ಕೆನರಾ ಬ್ಯಾಂಕ್ ಮನೆ ಬಾಗಿಲಿಗೆ ಮೊಬೈಲ್ ಎ ಟಿ ಎಂ ಸೇವೆ ಆರಂಭಿಸಿದೆ .download (2)

ಕೊರೊನ ವೈರಸ್ ಮಹಾಮಾರಿಯಿಂದಾಗಿ ದೇಶದ ಜನ ಜೀವನವೇ ತಲ್ಲಣವಾಗಿದೆ .ಕೋರೋಣ ಸೋಂಕು ತಡೆಯಲು ಈಗಾಗಲೇ ದಾದ್ಯಂತ ಲಾಕ್ ಡೌನ್ ಮಾಡಲಾಗಿದೆ ಇದರಿಂದಾಗಿ ಜನ ಸಾಮಾನಿಗೆ ತೊಂದರೆ ಆದರೂ ಕೂಡಾ ಈ ಕೊರೊನ ವೈರಸ್ ತಡೆಯಲು ಈ ಕ್ರಮ ಅನಿವಾರ್ಯವಾಗಿದೆ .ಲಾಕ್ ಡೌನ್ ಸಮಯದಲ್ಲಿ ತಮ್ಮ ಬ್ಯಾಂಕ್ ಗ್ರಾಹಕರಿಗೆ ತೊಂದರೆ ಆಗಬಾರದು ಎಂಬ ಹಿನ್ನಲೆಯಲ್ಲಿ ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಚೇರಿ ಯ ಮೂಲಕ ವಿನೂತನ ಸೇವೆಯನ್ನು ಬ್ಯಾಂಕ್ ಆರಂಭಿಸಿದೆ .

ಗ್ರಾಹಕರ ಮನೆಯ ಬಾಗಿಲಿಗೆ ಬ್ಯಾಂಕ್ ಸೇವೆಗಳು ದೊರೆಯಲಿದೆ .ಸಾರ್ವಜನಿಕ ರಂಗದ ಮಂಚೂಣಿಯಲ್ಲಿರುವ ಕೆನರಾ ಬ್ಯಾಂಕ್ ಈಗಾಗಲೇ ಹಲವಾರು ಉತ್ತಮ ಸೇವೆ ಗಳ ಮೂಲಕ ಮನೆ ಮಾತಾಗಿದೆ.ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಚೇರಿಯ ಮಹಾಪ್ರಭಂದಕ ಯೋಗೀಶ್ ಆಚಾರ್ಯ ಅವರು ಲಾಕ್ ಡೌನ್ ಸಮಯದಲ್ಲಿ ಗ್ರಾಹಕರು ಬ್ಯಾಂಕಿಂಗ್ ಸೇವೆಯಿಂದ ತೊಂದರೆಗೆ ಒಳಗಾಗಬಾರದು ಎಂಬ ಉದ್ದೇಶದಿಂದ ಮೊಬೈಲ್ ಎಟಿಎಂ ಸೇವೆಯನ್ನು ಮಂಗಳೂರುನಲ್ಲಿ ಆರಂಭಿಸಿದ್ದಾರೆ .

ಇದಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆಯೂ ದೊರೆತಿದೆ .ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ ಡೌನ್ ವೇಳೆ ಜನರು ಮನೆಯಲ್ಲಿ ಇರುವಂತೆ ಮನವಿ ಮಾಡಿದ್ದಾರೆ .ಕೆನರಾ ಬ್ಯಾಂಕ್ ಲಕ್ಷಾಂತರ ಗ್ರಾಹಕರನ್ನು ಹೊಂದಿದೆ.ಈ ಲಾಕ್ ಡೌನ್ ವೇಳೆ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಯಿಂದ ವಂಚಿತ ಅಗರಬಾರದು ಎಂಬ ಉದ್ದೇಶದಿಂದ ಮೊಬೈಲ್ ಎಟಿಎಂ ಸೇವೆ ಆರಂಭಿಸಲಾಗಿದೆ .ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕ್ ಸೇವೆ ನೀಡುತ್ತಿದೆ .ಇದಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆಯೂ ವ್ಯಕ್ತವಾಗಿದೆ ಎನ್ನುತ್ತಾರೆ ಕೆನರಾ ಬ್ಯಾಂಕ್ ಮಂಗಳೂರಿರು ವೃತ್ತ ಕಚೇರಿ ಮಹಾ ಪ್ರಭಂದಕ ಯೋಗೀಶ್ ಆಚಾರ್ಯ .

ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಜನರಿಗೆ ಬ್ಯಾಂಕ್ ಗಳಿಗೆ ಹೋಗಿ ವ್ಯವಹಾರ ನಡೆಸುವುಸು ಕಸ್ಟ್ಟ ಸಾಧ್ಯ.ಇಂತಹ ವೇಳ ಕೆನರಾ ಬ್ಯಾಂಕ್ ಗ್ರಾಹಕರಿಗೆ ಮನೆ ಬಾಗಿಲಿಗೆ ಸೇವೆ ನೀಡುತ್ತಿರುವುದು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ

By suddi9

Leave a Reply

Your email address will not be published. Required fields are marked *