ಉಳ್ಳಾಲ: ಕೊರೊನ ಸೋಂಕಿನಿಂದ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಗಾಳದಕೊಂಕಣಿ ಅಭ್ಯುದಯ ಸಂಘದ ವತಿಯಿಂದ ಮಂಗಳೂರು ಮತ್ತು ಬಂಟ್ವಾಳ ಪರಿಸರದಲ್ಲಿ ವಾಸ್ತವ್ಯವಿರುವ ಗಾಳದ ಕೊಂಕಣಿ ಸಮುದಾಯದ ಸುಮಾರು 200 ಬಡ ಕುಟುಂಬಗಳಿಗೆ ದಿನಬಳಕೆ ಸಾಮಾಗ್ರಿಗಳ ಖರೀದಿಗೆ ತಲಾ 1000 ರೂ.ಧನ ಸಹಾಯವನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಹರೇಕಳ ಅವರ ನಿರ್ದೇಶನದಂತೆ ಪದಾಧಿಕಾರಿಗಳು, ಸದಸ್ಯರು ಬಡಕುಟುಂಬದ ಮನೆಗೆ ತೆರಳಿ ಈ ಧನ ಸಹಾಯ ವಿತರಿಸಿದರು.
