ಶ್ರೀನಿವಾಸಪುರ:  ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ತರಕಾರಿ ಖರೀದಿಸಲು ಚಿಲ್ಲರೆ ವ್ಯಾಪಾರಿಗಳು ಹಾಗೂ ಗ್ರಾಹಕರು, ಸಾಮಾಜಿಕ ಅಂತರ ಪಾಲಿಸುವುದನ್ನು ಮರೆತು ಮುಗಿಬಿದ್ದರು.1..
  ಮಾರುಕಟ್ಟೆ ಪ್ರಾಂಗಣದಲ್ಲಿ ಬೆಳಿಗ್ಗೆ 10 ಗಂಟೆ ವರೆಗೆ ತರಕಾರಿ ಮಾರಾಟಕ್ಕೆ ಅನುಮತಿ ನೀಡಲಾಗಿದ್ದು, ರೈತರು ಗ್ರಾಮೀಣ ಪ್ರದೇಶದಿಂದ ವಿವಿಧ ತರಕಾರಿ ತಂದಿದ್ದರು. ತಂದ ತರಕಾರಿ ಹರಾಜು ಹಾಕುವ ಸಂದರ್ಭದಲ್ಲಿ, ತರಕಾರಿ ಖರೀದಿಸಲು ಬಂದಿದ್ದ ಚಿಲ್ಲರೆ ವ್ಯಾಪಾರಿಗಳು ಹಾಗೂ ಗ್ರಾಹಕರು ವಿವೇಚನಾ ರಹಿತವಾಗಿ ಗುಂಪಾಗಿ ನಿಂತು ಆತಂಕ ಮೂಡಿಸಿದರು.
  ಪುರಸಭೆ ಆರೋಗ್ಯ ನಿರೀಕ್ಷಕರಾದ  ಕೆ.ಜಿ.ರಮೇಶ್‌, ಪೃಥ್ವಿರಾಜ್‌ ಸ್ಥಳಕ್ಕೆ ಆಗಮಿಸಿ ಕೊರಾನ ಮಾರಿ ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಪಾಲಿಸುವಂತೆ ತಿಳಿಸಿದರು.

By suddi9

Leave a Reply

Your email address will not be published. Required fields are marked *