ಕೈಕಂಬ: ಕೋವಿಡ್- 19ವೈರಸ್ ಹರಡುವುದನ್ನು ತಡೆಯುವ ಉಪಕ್ರಮವಾಗಿ ಪ್ರಧಾನಮಂತ್ರಿಗಳು ಆದಿತ್ಯವಾರ ಜನತಾ ಕರ್ಪ್ಯೂ ಆಚರಿಸುವಂತೆ ನೀಡಿದ್ದ ಕರೆಗೆ ಗುರುಪುರ ಕೈಕಂಬ, ಗಂಜಿಮಠ, ಎಡಪದವು ಮತ್ತು ಕುಪ್ಪೆಪದವು ಪರಿಸರದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಅಂಗಡಿ ಮುಂಗಟ್ಟುಗಳು, ಖಾಸಗಿ ಸಂಸ್ಥೆಗಳು, ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಅಲ್ಲೊಂದು ಇಲ್ಲೊಂದು ಕಾರು, ಬೈಕ್ ಸಂಚಾರ ಹೊರತುಪಡಿಸಿ ಯಾವುದೇ ವಾಹನಗಳು ರಸ್ತೆಗಿಳಿದಿಲ್ಲ.
ಕುಪ್ಪೆಪದವು ಇಲ್ಲಿನ ಮೈ ದಾನವೊಂದರಲ್ಲಿ ಕೆಲವು ಯುವಕರು ಆಟವಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತ ತಕ್ಷಣ ಧಾವಿಸಿ ಬಂದ ಬಜಪೆ ಪೊಲೀಸರು ಯುವಕರಿಗೆ ಮನವರಿಕೆ ಮಾಡಿಕೊಟ್ಟು ಒಂದೆಡೆ ಸೇರದಂತೆ ಸೂಚನೆ ನೀಡಿದರು, ಕುಪ್ಪೆಪದವು ಪ್ರಾಥಮಿಕ ಆರೋಗ್ಯಕೇಂದ್ರದ ಬಳಿಯೂ ಕೆಲವರು ಅಂಗಡಿಯೊಂದರ ಬಳಿ ಸೇರಿದ್ದು ಕಂಡು ಬಂತು.

By Suddi9

Leave a Reply

Your email address will not be published. Required fields are marked *