ಕರಾವಳಿ ಟೈಮ್ಸ್ ಕನ್ನಡ ಪಕ್ಷಿಕಿ ಇದರ 5ನೇ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ವೆಬ್ ಸೈಟ್ ಲೋಕಾರ್ಪಣೆ ಹಾಗೂ ಪತ್ರಿಕಾ ಸಂಚಿಕೆ ಬಿಡುಗಡೆಯನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ ರಮಾನಾಥ ರೈ ಯವರು ಉದ್ಘಾಟಿಸಿ ಶುಭ ಹಾರೈಹಿಸಿದರು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ವಾರ್ತಾಧಿಕಾರಿಗಳಾದ ಜನಾಬ್ ಖಾದರ್ ಷಾ, ತಾ.ಪಂ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ,ಪುರಸಭಾ ಸದಸ್ಯರಾದ ಅಬೂಬಕ್ಕರ್ ಸಿದ್ದಿಕ್ ಗುಡ್ಡೆಅಂಗಡಿ,ಹಿದಾಯ ಪೌಡೆಶನ್ ಮಂಗಳೂರು ಸಂಚಾಲಕರಾದ ಮುಹಮ್ಮದ್ ಹನೀಫ್ ಗೋಳ್ತಮಜಲು,
ಅಖಿಲ ಭಾರತ ಬ್ಯಾರಿ ಪರಿಷತ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ಕೆ ಎಸ್ ಅಬೂಬಕ್ಕರ್ ಪಲ್ಲಮಜಲು,ಮಹಮ್ಮದ್ ಹನೀಫ್ ಹಾಸ್ಕೋ, ಫಾರೋಕ್ ಗೂಡಿನಬಳಿ, ಬಂಟ್ವಾಳ ಕಾರ್ಯನಿತರ ಪತ್ರಕರ್ತರ ಅಧ್ಯಕ್ಷರಾದ ಹರೀಶ್ ಮಾಂಬಾಡಿ,ಮಾಜಿ ಪುರಸಭಾ ಸದಸ್ಯರಾದ ಶ್ರೀಮತಿ ಚಂಚಲಾಕ್ಷಿ, ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್ ಮತ್ತು ಸುದೀಪ್ ಕುಮಾರ್ ಶೆಟ್ಟಿ, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಝಕ್ ಇರಾ,ಮೊದಲಾದವರು ಉಪಸ್ಥಿತರಿದ್ದರು.

