ಕೈಕಂಬ:ಒಡ್ಡೂರು ಫಾರ್ಮ್ ಹೌಸ್ ಧರ್ಮಚಾವಡಿಯಲ್ಲಿ ಶ್ರೀ ಕೊಡಮಣಿತ್ತಾಯ ದೈವದ ವೈಭವದ ಧರ್ಮನೇಮೋತ್ಸವಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಶೋಭಿಸುತ್ತಿರುವ ಒಡ್ಡೂರು ಫಾರ್ಮ್‍ನ್ಲಲಿ ಎತ್ತ ನೋಡಿದರಲ್ಲಿ ಜನಸಾಗರವೇ ಕಾಣುತ್ತಿದ್ದಾರೆ.
ಒಂದು ವೇದಿಕೆಯಲ್ಲಿ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ನಡೆಯುತ್ತಿರುವ ಸಾಂಸ್ಕøತಿಕ ವೈಭವ ಮನಸೂರೆಗೊಳ್ಳುತ್ತಿದೆ. ಊಟ ಉಪಹಾರದ ಅಚ್ಚುಕಟ್ಟಾದ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವ ಸ್ವಯಂಸೇವಕರು ಆಗಮಿಸದ ಭಕ್ತರನ್ನು ಆದರದಿಂದ ಸತ್ಕರಿಸುತ್ತಿದ್ದಾರೆ.


