ಕೈಕಂಬ : ತುಳುನಾಡು ದೈವ,ಭೂತಾರಾಧನೆಗೆ ಪ್ರಸಿದ್ದಿಯಾದ ನಾಡು.ಇಲ್ಲಿನ ಜನರು ದೇವರನ್ನು ಎಷ್ಟು ಭಯಭಕ್ತಿಯಿಂದ ಆರಾಧಿಸುತ್ತಾರೋ ,ಅಷ್ಟೆ ಭಯಭಕ್ತಿಯಿಂದ ದೈವಗಲನ್ನೂ ಆರಾಧಿಸಿಕೊಂಡು ಬರುತ್ತಾರೆ,ದೈವಗಳೂ ಕಾಲಕಾಲಕ್ಕೆ ತಮ್ಮ ಕಾರಣಿಕವನ್ನು ತೋರ್ಪಡಿಸಿದ ಅದೆಷ್ಟೋ ಉದಾಹರಣೆಗಳು ತುಳುನಾಡಿನಾದ್ಯಂತ ಕಂಡು ಬರುತ್ತವೆ.ನಮ್ಮ ಹಿರಿಯರು ಬೇರೆ ಬೇರೆ ದೈವಭೂತಗಳನ್ನು ತಮ್ಮ ಮನೆಗಳಲ್ಲಿ ,ಊರಿನ ದೈ ವಸ್ಥಾನಗಳಲ್ಲಿ,ಆರಾಧಿಸಿಕೊಂಡು ,ಪರ್ವ,ಕೋಲ ,ನೇಮೋತ್ಸವಗಳನ್ನು ನೀಡುವ ಮೂಲಕ ತಮಗೆ ಮತ್ತು ಊರಿಗೆ ಎದುರಾಗುವ ದುರಿತಗಳನ್ನು ದೂರ ಮಾಡುವಂತೆ ಬೇಡಿಕೊಳುತ್ತಿದ್ದರು.
ಇಂದಿಗೂ ಈ ಸಂಪ್ರದಾಯ ಅಭಾದಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ.ದೈವಗಳಲ್ಲಿ ರಾಜನ್ ದೈವವಾಗಿ ತುಳುನಾಡಿನಲ್ಲಿ ನೆಲೆಯಾಗಿರುವ ಕೊಡಮಣಿತ್ತಾಯ ದೈವಕ್ಕೆ ಒಡ್ಡೂರು ಫಾರ್ಮ್ ಹೌಸ್ ನಲ್ಲಿ ಧರ್ಮನೇಮೋತ್ಸವ
