ಕೈಕಂಬ:ಗಂಜಿಮಠ ರೈತರ ಸಂಘ ಮತ್ತು ಗಂಜಿಮಠ ಸಹಕಾರಿ ಕ್ಷೇತ್ರದ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಭಾಜಪಾ ಬೆಂಬಲಿತ 12 ಅಭ್ಯರ್ಥಿಗಳೂ ಜಯ ಸಾಧಿಸಿದ್ದು ಅವರನ್ನು ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿಯವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಉತ್ತರ ಮಂಡಲದ ಭಾಜಪಾ ಅಧ್ಯಕ್ಷ ತಿಲಕರಾಜ್ ಕೃಷ್ಣಾಪುರ ಸಹಿತ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
