ಕುಪ್ಪೆಪದವು: ಮಂಗಳೂರು ತಾಲೂಕಿನ ಕುಳವೂರು ಗ್ರಾಮದ ತೆರೆಜಾಲು ದೊಂಪದ ಬಲಿ ಉತ್ಸವವು ಫೆಬ್ರವರಿ 25 ರ ಮಂಗಳವಾರ ಆರಂಭಗೊಂಡು 27 ರ ಗುರುವಾರದವರೆಗೆ ನಡೆಯಲಿದೆ.25 ರ ಮಂಗಳವಾರ ಬೆಳಿಗ್ಗೆ 7:45 ಕ್ಕೆ ಕೋಳಿ ಕುಂಟ ಮತ್ತು ಕಂಬ ಮುಹೂರ್ತ,8 ಗಂಟೆಗೆ ಫಲ್ಗುಣಿ ನದಿ ತೀರದ ಅಶ್ವಥ ಕಟ್ಟೆಯಲ್ಲಿ ಸತ್ಯನಾರಾಯಣ ಪೂಜೆ,ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ .ರಾತ್ರಿ ನವಕ ಪ್ರದಾನ,ಹಾಗೂ ಮಾರಿಪೂಜೆ ನಡೆಯಲಿದೆ.26 ರ ಬುಧವಾರ ಸೂರ್ಯೋದಯಕ್ಕೆ ಧೂಮಾವತಿ ಮತ್ತು ಕನಲ್ಲಾಯ ದೈವಗಳ ಭಂಡಾರ ಏರುವುದು,ರಾತ್ರಿ 10 ರಿಂದ ಮಹಿಷಂದಾಯ ಮತ್ತು ಧೂಮಾವತಿ ದೈವದ ನೇಮ.27 ರ ಗುರುವಾರ ರಾತ್ರಿ ಗಂಟೆ 11 ರಿಂದ ಕನಲ್ಲಾಯ ದೈವದ ನೇಮ ಮತ್ತು ಕಲ್ಕುಡ -ಕಾಳಮ್ಮ ದೈವಗಳ ಕೋಲ ನಡೆಯಲಿದ್ದು ನಂತರ ಭಂಡಾರ ಇಳಿಯುವುದು.ಗುರುವಾರ ಸಾಯಾಂಕಾಲ 6:30ರಿಂದ ಶ್ರೀಧೂಮಾವತಿ ಕನಲ್ಲಾಯ ಯೂತ್ ಕ್ಲಬ್(ರಿ)ಇದರ 8 ನೇ ವರ್ಷದ ಪ್ರಯುಕ್ತ ಲ|ಕಿಶೋರ್ ಡಿ ಶೆಟ್ಟಿ ನಿರ್ದೇಶನದ “ಗುಟ್ಟು ಗೊತ್ತಾ oಡ್ “ಎಂಬ ತುಳು ಹಾಸ್ಯ ನಾಟಕ ಪ್ರದರ್ಶನ ನಡೆಯಲಿದೆ.
