ಕುಪ್ಪೆಪದವು:ಶ್ರೀಸಾಂಬ ಸದಾಶಿವ ದೇವಸ್ಥಾನ ಬಾರ್ದಿಲ ಕುಪ್ಪೆಪದವು ಇಲ್ಲಿ 21 ರ ಶುಕ್ರವಾರ ಶಿವರಾತ್ರಿ ಮಹೋತ್ಸವ ಜರಗಲಿದೆ ,ಬೆಳಿಗ್ಗೆ 8 ಗಂಟೆಗೆ ಗಣ ಯಾಗ ,ಸತ್ಯನಾರಾಯಣ ಪೂಜೆ ,11 ಗಂಟೆಗೆ ನಾಗ ತಂಬಿಲ ,ರಕ್ತೇಶ್ವರಿ ಗೆ ತಂಬಿಲ ಸೇವೆ ,ಸುವಾಸಿನಿ ಪೂಜೆ ,ಅಷ್ಟೋತ್ತರ ದೂಪಾರ್ಚನೆ ,ಅಪ್ಪದ ಪೂಜೆ ,ಮಧ್ಯಾಹ್ನ ರುದ್ರಾಭಿಷೇಕ ,ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ ,ರಾತ್ರಿ 8 ರಿಂದ ಏಕಾದಶ ರುದ್ರಾಭಿಷೇಕ ,ಶಿವಪಾರ್ವತಿ ಪೂಜೆ,ರಂಗಪೂಜೆ ನಡೆಯಲಿದೆ ರಾತ್ರಿ ಜಾಗರಣೆಯ ಅಂಗವಾಗಿ ರಾತ್ರಿ 7 ರಿಂದ ಶನಿವಾರ ಮುಂಜಾನೆ 6 ಗಂಟೆವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
