ಕೈಕಂಬ: : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಕಾಲಾವಧಿ ಬಂಡಿ ಜಾತ್ರೆ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣದೊಂದಿಗೆ ಆರಂಭಗೊಂಡಿತು.ಮುಂಜಾನೆ 5 ಗಂಟೆಗೆ ಭಂಡಾರಮನೆಯಿಂದ ದೈವಸ್ಥಾನಕ್ಕೆ ದೈವಗಳ ಆಗಮನವಾಯಿತು.

gur-feb-14-kanchilu seve-2ಬಳಿಕ `ಬಂಡಿ’ ಜಾತ್ರೆಯಲ್ಲಿ ಪ್ರಮುಖ ಧಾರ್ಮಿಕ ವಿಧಿಯಾದ ಧ್ವಜಾರೋಹಣ ಹಾಗೂ ಶ್ರೀ ಮುಂಡಿತ್ತಾಯ ಮತ್ತು ಶ್ರೀ ಧೂಮಾವತಿ ದೈವ ಪಾತ್ರಿಗಳ ದರ್ಶನ, ಪ್ರಸಾದ ವಿತರಣೆ ನಡೆಯಿತು. ಈ ವೇಳೆ ಗುತ್ತಿನ ಯಜಮಾನರು, ಸೇವಾ ಮನೆತನದವರು, ಆಡಳಿತಾಧಿಕಾರಿ, ಗಡಿಕಾರ ಪ್ರಮೋದ್ ಕುಮಾರ್ ರೈ, ತಂತ್ರಿಗಳು, ಊರ-ಪರವೂರ ನೂರಾರು ಭಕ್ತಜನರು ಉಪಸ್ಥಿತರಿದ್ದರು.

gur-feb-14-dwajarohana-2ತದನಂತರ ಭಕ್ತರಿಂದ ಕಂಚಿಲು ಸೇವೆ ಹಾಗೂ ಉರುಳು ಸೇವೆ ನಡೆಯಿತು. ಮಧ್ಯಾಹ್ನ ಒಂದು ಗಂಟೆಗೆ ಕಲ್ಲಕಲಂಬಿ ಬಾಬು ಶೆಟ್ಟಿಯವರ ಸ್ಮರಣಾರ್ಥ ಪತ್ನಿ ಜಯಂತಿ ಬಿ ಶೆಟ್ಟಿ ಹಾಗೂ ಮಕ್ಕಳಾದ ಹರೀಶ್ ಬಿ ಶೆಟ್ಟಿ ಸುಜಾತಾ ಶೆಟ್ಟಿ, ದಿನೇಶ್ ಬಿ ಶೆಟ್ಟಿಯವರಿಂದ ಮಹಾ ಅನ್ನಸಂತರ್ಪಣೆ ಸೇವೆ ನಡೆಯಿತು.ಫೆ. 14ರಂದು ರಾತ್ರಿ ಶ್ರೀ ವೈದ್ಯನಾಥ ದೈವದ ನೇಮ ಹಾಗೂ ಮುಂಜಾನೆ ಬಂಡಿ ರಥೋತ್ಸವ ನಡೆಯಿತು. ಫೆ. 15ರಂದು ರಾತ್ರಿ ಶ್ರೀ ಧೂಮಾವತಿ, ಬಂಟ, ಪರಿವಾರ ದೈವಗಳ ನೇಮ ಜರುಗಲಿದೆ. ಫೆ. 16ರಂದು ಸಂಜೆ `ತುಡರ ಬಲಿ’ ಹಾಗೂ ಧ್ವಜಾವರೋಹಣ ನಡೆಯಲಿದೆ.

gur-feb-14-dwajarohana-1

gur-feb-14-dwaja-2

By Suddi9

Leave a Reply

Your email address will not be published. Required fields are marked *