ಕೈಕಂಬ:ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ(ರಿ) ಇರುವೈಲು-ಪುಚ್ಚಮೊಗರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಗುರುಮೂರ್ತಿ ಪ್ರತಿಷ್ಠಾ ಕಲಶಾಭಿಷೇಕವು ಫೆ.14 ಶುಕ್ರವಾರ ಶಿವಗಿರಿ ಮಠದ ಪೀಠಾಧಿಪತಿ ಶ್ರೀಶ್ರೀಶ್ರೀ ವಿಶುದ್ಧಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಬಲ್ಯೊಟ್ಟು ಶ್ರೀಶ್ರೀಶ್ರೀ ವಿಖ್ಯಾತಾನಂದ ಸ್ವಾಮೀಜಿಯವರ ದಿವ್ಯಹಸ್ತದಲ್ಲಿ ಮೂಡಬಿದ್ರೆ ಶ್ರೀ ಶಿವಾನಂದ ಶಾಂತಿಯವರ ಪೌರೋಹಿತ್ಯದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬ:ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘದ ಅಧ್ಯಕ್ಷ ಕುಮಾರ್ ಪೂಜಾರಿ, ಗೌರವಾಧ್ಯಕ್ಷ ಮುತ್ತಪ್ಪ ಎಂ ಸಾಲ್ಯಾನ್, ಉಪಾಧ್ಯಕ್ಷರು ಪದ್ಮನಾಭ ಪೂಜಾರಿ ಕನಡ್ರಕೋಡಿ, ಹರೀಶ್ ಬಂಗೇರ ಕಮಲಗಿರಿ ಅರ್ಬಿ, ಶಿವಾನಂದ, ತಿಮ್ಮಪ್ಪ ಪೂಜಾರಿ, ಕಾರ್ಯದರ್ಶಿ ದಿನೇಶ್ ಪೂಜಾರಿ, ಕೋಶಾಧಿಕಾರಿ ರಜನೀಕಾಂತ, ಮಜಲು,
ಸುನೀಲ್ ಕುಮಾರ್, ಜೊತೆ ಕಾರ್ಯದರ್ಶಿ ಐ.ಜಿ.ರಮೇಶ್ ಪೂಜಾರಿ ಗೋಳಿದಡಿ, ಮಾರಪ್ಪ ಪೂಜಾರಿ,ಇರುವೈಲು ತಾರಾನಾಥ್ ಪೂಜಾರಿ, ಸತೀಶ್ಚಂದ್ರ ಸಾಲ್ಯಾನ್, ಉಮೇಶ್ ಟಿ.ಕರ್ಕೆರ, ವಿಶ್ವನಾಥ ಡಿ.ಪೂಜಾರಿ, ದೀಪಾ ದಿನೇಶ್, ವಿದ್ಯಾಶಂಕರ್, ಪ್ರಮೀಳಾ ರಾಜೇಶ್, ಗೀತಾ ಜಯರಾಮ್, ರೇಣುಕಾ ಪ್ರಶಾಂತ್, ಶ್ವೇತಾ ಶಿವಾನಂದ, ಶೋಭಾ ಸೋಮಶೇಖರ, ತಾರಾ ಜನಾರ್ಧನ,ವೆಂಕಟೇಶ್ ಪೂಜಾರಿ ತ್ಯಾಂಪೆಟ್ಟು ಗುಜರಾತ್ ಮತ್ತಿತ್ತರರು ಉಪಸ್ಥಿತರಿದ್ದರು.









