ಕೈಕಂಬ:ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ(ರಿ) ಇರುವೈಲು-ಪುಚ್ಚಮೊಗರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ನೂತನ ಸಭಾಭವನ ಉದ್ಘಾಟನಾ ಸಮಾರಂಭದ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮವು ಫೆ.13 ಗುರುವಾರ ಬೆಳಗ್ಗೆ 8ರಿಂದ ಸ್ಥಳ ಶುದ್ಧಿ , ದೀಪ ಪ್ರಜ್ವಲನೆ, ಆಚಾರ್ಯವರ್ಣ, ಸಾಮೂಹಿಕ ದೇವತಾ ಪ್ರಾರ್ಥನೆ ಉಗ್ರಾಣ ಮಹೂರ್ತ, ತೋರಣ ಮಹೂರ್ತ , ಗಣಪತಿ ಹೋಮ, ಮಧ್ಯಾಹ್ನ 3.30ರಿಂದ ಮೂಡಬಿದ್ರೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಿಂದ ಗುರುಮೂರ್ತಿಯ ಶೋಭಾಯಾತ್ರೆ ಹೊರಡುವುದು.
ಉಮೇಶ್ ಟಿ.ಕರ್ಕೇರ ತ್ಯಾಂಪೆಟ್ಟು, ಇರುವೈಲು, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ(ರಿ)ಮೂಡಬಿದರೆ ಇದರ ಅಧ್ಯಕ್ಷರು ಪಿ.ಕೆ.ರಾಜು ಪೂಜಾರಿ, ಮೂಡಬಿದರೆ ಘಟಕ ಯುವವಾಹಿನಿ ಅಧ್ಯಕ್ಷರು ಜಗದೀಶ್ಚಂದ್ರ ಡಿ.ಕೆ.ಮಾಸ್ತಿಕಟ್ಟೆ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ, ಸಂಜೆ 6.30ರಿಂದ ವಾಸ್ತು ಪೂಜೆ, ರಾಕ್ಷೋಘ್ನ ಹೋಮ, ವಾಸ್ತುಬಲಿ, ವಾಸ್ತುಹೋಮ, ಪುಣ್ಯಾಹ, ಪ್ರಸಾದ ಶುದ್ದಿ, ಬಿಂಬಶುದ್ಧಿ ನಡೆಯಲಿದೆ.
