ವಾಮಂಜೂರು : ದೇಶದ ಗ್ರಾಮೀಣ ಪ್ರದೇಶದ ಐಟಿಐಗಳು ಅತ್ಯುತ್ತಮ ತರಬೇತಿ ನೀಡುತ್ತಿವೆ. ದಕ ಜಿಲ್ಲೆಯ ಐಟಿಐಗಳು ಕ್ರಮಬದ್ಧ ಮತ್ತು ಶಿಸ್ತುಬದ್ಧ ಶಿಕ್ಷಣಕ್ಕೆ ಹೆಸರಾಗಿವೆ. ಇಲ್ಲಿನ ಐಟಿಐ ವಿದ್ಯಾರ್ಥಿಗಳಿಗೆ ದೇಶ-ವಿದೇಶಗಳಲ್ಲಿ ವಿಫುಲ ಅವಕಾಶವಿದೆ ಎಂದು ಮೂಲ್ಕಿ ಎಂ ಆರ್ ಪೂಂಜ ಐಟಿಐ ಪ್ರಾಂಶುಪಾಲ ಯಶವಂತ ಎನ್ ಸಾಲ್ಯಾನ್ ಹೇಳಿದರು. ವಾಮಂಜೂರು ಎಸ್‍ಡಿಎಂ ಮಂಗಳಜ್ಯೋತಿ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ) ಇದರ ಏಳನೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.gur-feb-7-udgatane

ಮಂಗಳೂರು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಡಾ. ಜಿ ವಿ ಹೆಗ್ಡೆ ಮಾತನಾಡಿ, ಈಗ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಆಧುನಿಕ ಯಂತ್ರೋಪಕರಣಗಳ ಬಳಕೆಯಾಗುತ್ತಿದ್ದು, ಇಲ್ಲೆಲ್ಲ ಕೌಶಲ್ಯಯುಳ್ಳ ವಿದ್ಯಾರ್ಥಿಗಳ ಅಗತ್ಯವಿದೆ. ಉದ್ಯೋಗ ಕೇತ್ರಗಳಲ್ಲಿ ಐಟಿಐ ಕಲಿತ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಿದ್ದು, ಸ್ವಂತಿಕೆ ಮೂಲಕವೂ ಜೀವನ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದರು.gur-feb-7-yashavwanth speaking

ಅಂಗವಿಕಲರ ಕಲ್ಯಾಣ ಸಂಸ್ಥೆ(ರಿ) ಮಂಗಳೂರು ಇದರ ಕಾರ್ಯದರ್ಶಿ ಪ್ರೊ. ಎ ರಾಜೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಸ್ಥಳೀಯ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್, ಸಂಸ್ಥೆಯ ಖಜಾಂಚಿ ಕೆ ದೇವರಾಜ್, ಆಡಳಿತಾಧಿಕಾರಿ ಗಣೇಶ್ ಭಟ್, ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕ ರಮೇಶ್ ಆಚಾರ್ಯ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಮಾರಿಯಟ್ ಮಸ್ಕರೇನಸ್ ಉಪಸ್ಥಿತರಿದ್ದರು.gur-feb-7-narendra speaking

ಐಟಿಐ ಪ್ರಾಂಶುಪಾಲ ನರೇಂದ್ರ ಪ್ರಾಸ್ತಾವಿಕದೊಂದಿಗೆ ಅತಿಥಿಗಳ ಸ್ವಾಗತಿಸಿದರು. ಸಂಸ್ಥೆಯ ಮುಖ್ಯ ತರಬೇತಿ ಅಧಿಕಾರಿ ಫ್ಲಾವಿಯಾ ಡಿ’ಸೋಜ 2019-20ರ ಸಾಲಿನ ಸಂಸ್ಥೆಯ ವರದಿ ವಾಚಿಸಿದರು. ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಪ್ರಿಯಾ ಬಹುಮಾನಿತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಕಿರಿಯ ತರಬೇತಿ ಅಧಿಕಾರಿಗಳಾದ ಪ್ರಫುಲ್ಲಾ ಮತ್ತು ಸುಜೀತಾ ಕಾರ್ಯಕ್ರಮ ನಿರೂಪಿಸಿದರೆ, ಕಿರಿಯ ತರಬೇತಿ ಅಧಿಕಾರಿ ರಾಜೇಶ್ವರಿ ವಂದಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಸಿಬ್ಬಂದಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

By Suddi9

Leave a Reply

Your email address will not be published. Required fields are marked *