ಕಟೀಲು : ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಐದು ವರ್ಷದ ಮಗು ನಿಹಾರಿಕಾ ಚಿಕಿತ್ಸಗೆ ಮೂಡುಬಿದಿರೆಯ ನೇತಾಜಿ ಬ್ರಿಗೇಡ್ ಸಂಘಟನೆಯ ಸದಸ್ಯರು ವಿಶೇಷ ವೇಷ ಧರಿಸಿ ಕಟೀಲು ಬ್ರಹ್ಮಕಲಶೋತ್ಸವದ ದಿನಗಳಲ್ಲಿ ಒಟ್ಟು ಮೂರುಲಕ್ಷದ ನೂರಮೂವತ್ತಾರು ರೂಪಾಯಿ ಧನ ಸಹಾಯ ಸಂಗ್ರಹಿಸಿ ಮಗುವಿನ ಮನೆಯವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಮೂಲ್ಕಿ ಮೂಡಬಿದಿರೆ ಶಾಸಕ ಉಮನಾಥ ಕೋಟ್ಯಾನ್, ಕೋಲಾರದ ಸಂಸದ ಮುನಿಸ್ವಾಮಿ, ಕಟೀಲು ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಾಜಿ ಜಿಪಂ ಸದಸ್ಯ ಈಶ್ವರ್ ಕಟೀಲು, ಸಂದೇಶ್ ಶೆಟ್ಟಿ, ಕಟೀಲು ಬ್ರಹ್ಮಕಲಶೋತ್ಸವದ ವಿವಿಧ ಸಮಿತಿಯ ಪದಾಧಿಕಾರಿಗಳು ಹಾಗೂ ನೇತಾಜಿ ಬ್ರಿಗೇಡ್ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.
