” ಪತ್ರಿಕಾ ಮಾಧ್ಯಮಗಳು ಸ್ವಾಸ್ಥ್ಯ ಸಮಾಜದ ನಿರ್ಮಾಣದ ಕೈಗನ್ನಡಿ”-ನ್ಯಾಯಮೂರ್ತಿ ಅರಳಿ ನಾಗರಾಜ್ ಅಭಿಮತ…..
ಕುಂದಾಪುರ/ಗದಗ :-“ಪತ್ರಿಕಾ ಮಾಧ್ಯಮಗಳು ಸಮಾಜದ ಆಸ್ತಿ, ಅದಲ್ಲದೆ ಪತ್ರಿಕೆಗಳು ಸಮಾಜದ ಅಂಕು- ಡೊಂಕುಗಳನ್ನು ತಿದ್ದುವ ದರೊಂದಿಗೆ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಬಲ್ಲ ಶಕ್ತಿ ಪತ್ರಿಕೋದ್ಯಮಕ್ಕಿದೆ.ಪತ್ರಕರ್ತರ ಬರವಣಿಗೆ,ಅಂಕಣ  ಹಾಗೂ ವಿಶ್ಲೇಷಣಾತ್ಮಕ ಬರಹಗಳು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ದಾರಿದೀಪವಾಗುವಾಗಿರೊದು ಸತ್ಯ.ಕನ್ನಡದ ನಾಡು- ನುಡಿಯ ಸಂಸ್ಕೃತಿ ಉಳಿದಿರುವುದು ಇಂದಿನ ಪತ್ರಿಕೆಗಳು ಹಾಗೂ ಪತ್ರಕರ್ತರಿಂದ ಮಾತ್ರ. ಎಂದು ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಮಾನ್ಯ ಅರಳಿ ನಾಗರಾಜ ಗಂಗಾವತಿ ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರು ಕಾರ್ಯಕ್ರಮದ ಗೌರವ ಅಧ್ಯಕ್ಷರಾಗಿ ಇತ್ತೀಚೆಗೆ ಏರ್ಪಡಿಸಿದ “ಕರ್ನಾಟಕ ದರ್ಶನ ಮಾಧ್ಯಮ ಸಂಸ್ಥೆ “ಗದಗ / ಕರ್ನಾಟಕ ದರ್ಶನ ಶ್ರೇಯೋಭಿವೃದ್ಧಿ  ಸಂಘ(ರಿ.)ಹುಬ್ಬಳ್ಳಿ ಯ ಸಹಭಾಗಿತ್ವದಲ್ಲಿ  ಹೆಚ್ .ಕೆ. ಪಾಟೀಲ್ ಸಭಾಭವನ  ,ಎ.ಪಿ.ಎಂ.ಸಿ- ಗದಗ ಇಲ್ಲಿನ ಕಾರ್ಯಕ್ರಮದಲ್ಲಿ  “ರಾಷ್ಟ್ರೀಯ ಪ್ರಶಸ್ತಿ-೨೦೨೦”ಗಳನ್ನು ವಿತರಿಸಿ ಮಾತನಾಡಿದರು.
IMG_20200202_192127
 ಕಾರ್ಯಕ್ರಮದ ಇನ್ನೋರ್ವ ಅತಿಥಿ ಹಾಗೂ ಉದ್ಘಾಟಕರಾಗಿ ಮಾತನಾಡುತ್ತಾ  “ಪತ್ರಿಕೋದ್ಯಮ ದೇಶದ ಬೆನ್ನೆಲುಬು ಹಾಗೂ ಮಾಧ್ಯಮಗಳು  ಹಾಗೂ ಪತ್ರಕರ್ತರ ಶ್ರಮ ಸಮಾಜದ ಒಳಿತಿಗೆ ಭದ್ರ ಬುನಾದಿಯಾಗಿದೆ, ಅದರಲ್ಲೂ ಪತ್ರಕರ್ತರು ಕೇವಲ ಸುದ್ದಿ ಹುಡುಕುವುದರಲ್ಲೇ ನಿರತವಾಗದೆ, ಇಂತಹ ಸಮಾಜಮುಖಿ ಚಿಂತನೆಯುಳ್ಳ ಕಾರ್ಯಕ್ರಮವನ್ನು ಮಾಡುವುದರೊಂದಿಗೆ ಪತ್ರಕರ್ತರಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಹುರಿದುಂಬಿಸಿ ದಂತಾಗುತ್ತದೆ ” ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಮಾನ್ಯ ಶ್ರೀನಾಥ್ ಜೋಶಿ ತಮ್ಮ ಉದ್ಘಾಟನಾ ಭಾಷಣದಲ್ಲಿ ನುಡಿದರು.
FB_IMG_1566803236988ಕಾಲಜ್ಞಾನಿ ಬ್ರಹ್ಮ ಸದ್ಗುರು ಶರಣ ಬಸವ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದು, ಪರಮಪೂಜ್ಯ ಕಲ್ಲಜ್ಜನವರು  ವೀರೇಶ್ವರ ಪುಣ್ಯಾಶ್ರಮ ಗದಗ ಹಾಗೂ ಶ್ರೀಮ.ನಿ .ಪ್ರ .ಶಿವಾನುಭವ ಚರಮೂರ್ತಿ ಶಾಂತರುದ್ರಮುನಿ ಸ್ವಾಮೀಜಿಗಳು ,ಶಾಖಾಮಠ  ಸುರಪುರ.ಇವರು ದಿವ್ಯ ನೇತೃತ್ವ ವಹಿಸಿದ್ದರು.ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮಾಧ್ಯಮ ಭೂಷಣ ಪ್ರಶಸ್ತಿಗೆ ಪುರಸ್ಕೃತರಾದ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಮತ್ತು ರಾಜ್ಯದ ಪತ್ರಿಕೋದ್ಯಮ ಮತ್ತು ದೃಶ್ಯ ಮಾಧ್ಯಮ  ಕ್ಷೇತ್ರದಲ್ಲಿ ಸಾಧನೆ ಮಾಡಿದ 33 ಸಾಧಕರನ್ನು ಗುರುತಿಸಲಾಯಿತು.ಇವರಿಗೆ ರಾಷ್ಟ್ರೀಯ ಮಾಧ್ಯಮ ಭೂಷಣ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು.
IMG_20200203_213226ಕರಾವಳಿಗೆ ಒಟ್ಟು ಎಂಟು ಪ್ರಶಸ್ತಿಗಳು  ಲಭಿಸಿದ್ದು ಯಕ್ಷಗಾನ ವಿಭಾಗದಲ್ಲಿ ಮಂಕಿ ಈಶ್ವರ  ನಾಯಕ ಹೊನ್ನಾವರ,ಸಿನಿಮಾ ವಿಭಾಗಕ್ಕೆ   ಶ್ರೀ ನವೀನ್ ಪಡೀಲು ನಾಯಕ ನಟರು ತುಳು  ಸಿನಿಮಾ,ರಾಷ್ಟ್ರೀಯ ಕಲಾ  ಪ್ರಶಸ್ತಿಗೆ  ಆಯುಷ್ .ಜೆ ಶೆಟ್ಟಿ ಪುತ್ತೂರು,  ಕಲಾಭೂಷಣ ಪ್ರಶಸ್ತಿಗೆ ಕುಮಾರಿ ಶಿಲ್ಪಾ ಶೆಟ್ಟಿ,ಮನೀಶ್ ಕುಮಾರ್ ಶೆಟ್ಟಿ  ,ಸನ್ಮಿತ್ ಕುಲಾಲ್ ಮೂಡುಬಿದಿರೆ, ರಾಷ್ಟ್ರೀಯ ಕಲಾ ಮಾಣಿಕ್ಯ ಪ್ರಶಸ್ತಿಗೆ ಕುಮಾರಿ ಶ್ರಾವ್ಯ ಮರವಂತೆ ,ನಾಟ್ಯ ಕಲಾವಿದರು ಉಡುಪಿ.ಅದೇ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.ಕಾರ್ಯಕ್ರಮದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ವಿಶೇಷವಾಗಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಶ್ರೀ ಮಾನ್ಯ ಎಂ.ಜಿ ಹಿರೇಮಠ್ ಜಿಲ್ಲಾಧಿಕಾರಿಗಳು ಗದಗ, ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು, ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಮಾನ್ಯ ಜೋಶಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಗದಗ ಇವರು ನೆರವೇರಿಸಿದರು.
IMG_20200203_211809ಮುಖ್ಯ ಅತಿಥಿಗಳಾಗಿ ಶ್ರೀ ಸಿ.ಸಿ ಪಾಟೀಲ್, ಗಣಿ ಮತ್ತು ಭೂವಿಜ್ಞಾನ ಅರಣ್ಯ ಪರಿಸರ ಖಾತೆ ಸಚಿವರು ಬೆಂಗಳೂರು, ಶ್ರೀ ಹೆಚ್ . ಕೆ. ಪಾಟೀಲ್ ಮಾಜಿ ಸಚಿವರು ,ಶಾಸಕರು ಗದಗ,ಶ್ರೀ ರಾಮಣ್ಣ ಲಮಾಣಿ ಶಾಸಕರು ಶಿರಹಟ್ಟಿ , ಶ್ರೀಮಾನ್ ಡಿ.ಆರ್ ಪಾಟೀಲ್ ಶಾಸಕರು ಗದಗ,ಮಾನ್ಯ ಆರ್. ಹೆಚ್ .     ಕಟ್ಟಿಮನಿ ಪೊಲೀಸ್ ಇನ್ಸ್ ಪೆಕ್ಟರ್ ಶಿರಹಟ್ಟಿ, ಹೀಗೆ ಇತರ ಮಾನ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .ಈ ಕಾರ್ಯಕ್ರಮವನ್ನು ಕರ್ನಾಟಕ ದರ್ಶನ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರಾದ ಎಸ್. ಎಸ್ ಪಾಟೀಲ್ ಅವರು ನಿರ್ವಹಿಸಿ, ಶ್ರೀ ಶಿವಪುತ್ರಪ್ಪಾ ಎಸ್ .ಪಾಟೀಲ್ ಸ್ವಾಗತಿಸಿ ,ವಂದಿಸಿದರು.

 

By suddi9

Leave a Reply

Your email address will not be published. Required fields are marked *