ಗಾಂಧೀಜಿ ಯವರು ದೇಶ ಕಂಡ ಮಹಾನ್ ಚೇತನ. ಅವರ ಚಿಂತನೆ ಗಳಲ್ಲಿ ಸರ್ವರ ಅಭ್ಯುದಯವು ಒಂದು. ದೇಶ ಇಷ್ಟು ವರ್ಷ ಕ್ರಮಿಸಿದರೂ ಎಲ್ಲರ ಏಳಿಗೆ ಯಾಕೆ ಸಾಧ್ಯವಾಗಿಲ್ಲ ಎಂದು ಯುವ ಸಬಲೀಕರಣ ಕ್ರೀಡಾ ಇಲಾಖೆಯ ಯುವಸ್ಪಂದನ ಘಟಕದ ಪ್ರವರ್ತಕ ಡೊಂಬಯ್ಯ ಇಡ್ಕಿದು ಪ್ರಶ್ನಿಸಿದ್ದಾರೆ.
ಅವರು ನಗರದ ಥಿಯೋಲಾಜಿಕಲ್ ಕಾಲೇಜು ಇಲ್ಲಿ ನೆಹರು ಯುವ ಕೇಂದ್ರ ದ ವತಿಯಿಂದ ಗುರುವಾರ ನಡೆದ ಹುತಾತ್ಮರ ದಿನದ ಕಾರ್ಯಕ್ರಮ ದಲ್ಲಿ ವಿಶೇಷೋಪನ್ಯಾಸ ನೀಡಿದರು.
ಭಾರತವನ್ನು ಸಢೃಡವಾಗಿ ಬೆಳೆಸಬೇಕು ಎಂದು ಗಾಂಧೀಜಿ ಯವರ ಆಶಯವಾಗಿತ್ತು. ಸ್ವಾತಂತ್ರ್ಯ ನಂತರ ಭಾರತವನ್ನು ಸರ್ವ ಸಮಾನತೆಯ ಮೇಲೆ ಕಟ್ಟುವುದು ಅವರ ಕನಸಾಗಿತ್ತು.ಸಮಾಜದ ಕೆಳ ವರ್ಗದ ವರಿಗೂ ಸಮಾನ ಅವಕಾಶ ಸಿಕ್ಕಾಗ ಮಾತ್ರ ಏಳಿಗೆ ಸಾಧ್ಯ ಎಂಬುದನ್ನು ಗಾಂಧಿಜೀ ಕಂಡುಕೊಂಡಿದ್ದರು.
ಸೌಹಾರ್ದತೆಯ ಕಲ್ಪನೆ ಮುಂದಿರಿಸಿ ವ್ಯಕ್ತಿ ಮತ್ತು ಸಮಾಜದ ದೃಷ್ಟಿಯಿಂದ ಸಮನ್ವಯತೆಯ ವಿಚಾರವನ್ನು ಅವರು ಪ್ರತಿಪಾದಿಸಿದರು. ಆದರೂ ಇಂದಿಗೂ ಭಾರತ ತಲುಪಬೇಕಾದ ಮಟ್ಟ ತಲುಪದಿರುವುದು ವಿಷಾದನೀಯ ಎಂದರು.ಗಾಂಧೀಜಿ ಯವರ ಸಮುದಾಯಿಕ ಹಿತ, ಸಮಾನವೇತನ ಹಾಗೂ ರೈತ ಮತ್ತು ಕೂಲಿ ಕಾರ್ಮಿಕರ ಪರಿಸ್ಥಿತಿ ಬಗೆಗಿನ ಕಳವಳ ಇಂದಿಗೂ ಹಾಗೆ ಇದೆ. ಬಹುಜನರ ಸಂವರ್ಧನೆಯೆ ಸರ್ವರ ಸುಖವೆಂದು ಭಾವಿಸಿದ ಗಾಂಧೀಜಿ ಯವರ ನೀತಿ ಇನ್ನು ಕಲ್ಪನೆಯಾಗಿ ಉಳಿದಿರುವುದು ಭಾತರದ ದುರಂತವಾಗಿದೆ ಎಂದರು.
ನೆಹರು ಯುವ ಕೇಂದ್ರ ದ ರಘವೀರ ಸೂಟರ್ ಪೇಟೆ ಮಾತನಾಡಿ, ಈ ಮಹಾನ್ ವ್ಯಕ್ತಿ ಯನ್ನು ಸ್ಮರಿಸುವ ಮೂಲಕ ಅವರ ತತ್ವಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಹನಿ ಕಬ್ರಾಲ್ ಮಾತನಾಡಿ, ನಮ್ಮ ದಿನ ನಿತ್ಯದ ಜೀವನದಲ್ಲಿ ಉತ್ತಮ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರಶ್ನಿಸುವ ಮನೋಭಾವ ಬೆಳೆಸಿ ಕೊಳ್ಳಬೇಕು ಎಂದರು.ವಿದ್ಯಾರ್ಥಿ ಮೆಲ್ವಿನ್ ಕಾರ್ಯ ಕ್ರಮ ಸಂಯೋಜಿಸಿದರು.


