ಮಂಗಳೂರು: ತಾಲೂಕಿನ ಪ್ರತಿಷ್ಠಿತ ಸಹಕಾರ ಸಂಸ್ಥೆಗಳಲ್ಲಿ ಒಂದಾದ “ಪದವು ವ್ಯವಸಾಯ ಸೇವಾ ಸಂಘ”ದ ಮುಂದಿನ ಐದು ವರ್ಷದ ಆಡಳಿತ ಮಂಡಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆಗೇರಿದೆ.

ಬ್ಯಾಂಕಿನ ಆಡಳಿತ ಮಂಡಳಿಯ 13 ಸ್ಥಾನಗಳ ಪೈಕಿ 12 ಸ್ಥಾನವನ್ನು ಸಹಕಾರಿ ಭಾರತೀಯ ಅಭ್ಯರ್ಥಿಗಳು ಜಯಭೇರಿ ಸಾಧಿಸಿದ್ದು,ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೇವಲ 1 ಸ್ಥಾನಕಪ್ಟೇ ತೃಪ್ತಿಪಟ್ಟು ಮುಖಭಂಗ ಅನುಭವಿಸಿದೆ. ಗೆದ್ದ ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ ಅಭ್ಯರ್ಥಿಗಳು; ಸುಮನ ಶರಣು, ಉಮೇಶ್ ಡಿ ಶೆಟ್ಟಿ ,ಗೌತಮ್ ನೊರೋನ ,ವಿಜಯಕುಮಾರ್ ಶೆಟ್ಟಿ ,ತಾರನಾಥ್ ಬಿ ,ಸದಾಶಿವ ಕೋಟ್ಯಾನ್, ಶಿವರಾಮ್ ಭಂಡಾರಿ ,ಶ್ರೀನಿಧಿ ಭಾರದ್ವಾಜ್ ,ಕಿಶೋರ್ ಕುಮಾರ್, ಕಮಲಾಕ್ಷಿ ಭಂಡಾರಿ, ಈಶ್ವರ್ ನಾಯ್ಕ್ ,ನಾಗಮ್ಮ ಹಾಗೆಯೇ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಧಾಕರ್ ಅವರು ಗೆಲುವು ಸಾಧಿಸಿದ್ದಾರೆ.
