ನೀರುಮಾರ್ಗ:ನೂತನವಾಗಿ ಪುನಃ ನಿರ್ಮಾಣಗೊಂಡಿರುವ ಬೊಳ್ಮಾರಗುತ್ತಿನ ಮನೆಯ ಗೃಹಪ್ರವೇಶದ ಉದ್ದೇಶ ಶತ ನಾರೀಕೇಳ ಗಣಯಾಗ ಮತ್ತು ನೀರುಮಾರ್ಗ ಗ್ರಾಮದ ರಾಜಂದೈವ ಧರ್ಮ ಜಾರಂದಾಯ ಹಾಗೂ ಪರಿವಾರ ದೈವಗಳಿಗೆ ಧರ್ಮನೇಮೋತ್ಸವವು ಜ.31 ರಂದು ಶುಕ್ರವಾರ ನಡೆಯಲಿದೆ.
ಬೆಳಿಗ್ಗೆ 7ರಿಂದ 10 ರವರೆಗೆ 108 ತೆಂಗಿನಕಾಯಿ ಗಣಹೋಮ, 10.30ಕ್ಕೆ ಜಾರಂದಾಯ ಪರಿಹಾರ ದೈವಗಳ ಭಂಡಾರ ಅರೋಹಣ, 12.30ಕ್ಕೆ ಮಹಾ ಅನ್ನಸಂತರ್ಪಣೆ, ರಾತ್ರಿ 8.30ಕ್ಕೆ ಜಾರಂದಾಯ ಧರ್ಮನೇಮೋತ್ಸವ, ರಾತ್ರಿ 1ಕ್ಕೆ ಮೈಸಂದಾಯ, ವೈದ್ಯನಾಥ, ಧೂಮವತಿ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಬೊಳ್ಮಾರಗುತ್ತು ನೀರುಮಾರ್ಗ ಶ್ರೀನಿವಾಸ ಭಟ್ ಮತ್ತು ಮಕ್ಕಳು ತಿಳಿಸಿದ್ದಾರೆ.
