ಪೊಳಲಿ: ಶ್ರೀ ಕ್ಷೇತ್ರ ಪೊಳಲಿ ಕಲಾತ್ಮಕವಾಗಿದ್ದು, ಇದು ರಾಜ್ಯಕ್ಕೆ ಮಾದರಿ ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಅನ್ನದಾನ, ಪಾರ್ಕಿಂಗ್ ವ್ಯವಸ್ಥೆ ಹಾಗೂ ಇತರ ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ವತಿಯಿಂದ ಸಾಧ್ಯವಿರುವ ಎಲ್ಲ ಸಹಕಾರ ಇಲ್ಲಿಯ ಶಾಸಕ ರಾಜೇಶ್ ನಾಯಕ್ ಅವರ ಅಭಿಪ್ರಾಯದಂತೆ ಸರ್ವಾಂಗಿನ ಅಭಿವೃದ್ಧಿ ಚಿಂತನೆಗೆ ಒತ್ತು ನೀಡಲಾಗುವುದು ಎಂದು ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆ ಹಾಗೂ ದಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಹೇಳಿದರು.24vp kota 1

24-008

ಅವರು  ಜ.24 ರಂದು ಪೊಳಲಿಗೆ ಭೇಟಿ ನೀಡಿದ ಸಂಧರ್ಭ ಮಾದ್ಯಮ ದೊಂದಿಗೆ ಮಾತನಾಡಿದರು. ದೇವಸ್ಥಾನದ ಅಭಿವೃದ್ಧಿ ಹಿಂದಿರುವ ಆಡಳಿತ ಮಂಡಳಿ ಹಾಗೂ ಇತರೆಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಸಚಿವರಿಗೆ ದೇವಳದ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. 24vp kota 06

ದೇವಳದ ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಡಾ,ಮಂಜಯ್ಯ ಶೆಟ್ಟಿ ,ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿ, ದೇವಳದ ಪವಿತ್ರಪಾಣಿ ಮಾದವ ಭಟ್, ಪರಮೇಶ್ವರ ಭಟ್, ನಾರಾಯಣ ಭಟ್, ವೆಂಕಟೇಶ್ ನಾವಡ,ತಾ. ಪಂ.ಸದಸ್ಯ ಯಶವಂತ ಪೂಜಾರಿ, ಗ್ರಾ. ಪಂ ಸದಸ್ಯ ಕಿಶೋರು ಪಲ್ಲಿಪಾಡಿ, ಸುಬ್ರಾಯ ಕಾರಂತ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *