ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ರಥಬೀದಿಯಲ್ಲಿ ಜಾಹೀರಾತು ಅಲಂಕಾರ ಫಲಕಗಳನ್ನು ಖ್ಯಾತ ಕನ್ನಡ ಚಲನ ಚಿತ್ರ ನಟ ವಿಜಯರಾಘವೇಂದ್ರ ಶನಿವಾರ ಅನಾವರಣಗೊಳಿಸಿದರು. ಬ್ರಹ್ಮಕಲಶೋತ್ಸವದ ನಿಮಿತ್ತ ಅಲಂಕಾರ ಸಮಿತಿಯ ವತಿಯಿಂದ ವಿಶಿಷ್ಠ ಜಾಹೀರಾತು ಅಲಂಕಾರ ಫಲಕಗಳನ್ನು ನಿರ್ಮಾಣ ಮಾಡಲಾಗಿದೆ.
ಈ ಸಂದರ್ಭ ಮಾಲ್ಗುಡಿ ಡೇಸ್ ಚಿತ್ರದ ನಾಯಕಿ ನಟಿ ಗ್ರೀಷ್ಮಾ, ನಿರ್ದೇಶಕ ಕಿಶೋರ್ ಮೂಡಬಿದಿರೆ, ನಿರ್ಮಾಪಕ ರವಿಶಂಕರ್ ಪೈ, ಲೋಕಯ್ಯ ಸಾಲ್ಯಾನ್, ಅಲಂಕಾರ ಸಮಿತಿಯ ಚಂದ್ರಶೇಖರ ಸುವರ್ಣ, ಧನಂಜಯ ಶೆಟ್ಟಿಗಾರ್ ಸಾಗರಿಕಾ, ಸದಾಶಿವ ಕುದ್ರಿಪದವು, ರವಿ ಭಟ್ ಪಾವಂಜೆ, ಸುಶಾಂತ್ ಮಲ್ಲಿಗೆಯಂಗಡಿ, ಕೆ.ಬಿ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ಯಕ್ಷಗಾನ ವೇಷಭೂಷಣ ಮುಖವರ್ಣಿಕೆಗಳು ಹಾಗೂ ಕಟೀಲು ದೇವಳಕ್ಕೆ ಸಂಬಂಧಪಟ್ಟ ಚಿತ್ರಗಳನ್ನೊಳಗೊಂಡಿದೆ. ರಥಬೀದಿಯಲ್ಲಿ ಅಳವಡಿಸುವ ಈ ಜಾಹೀರಾತುಗಳಲ್ಲಿ ತಮ್ಮ ಹೆಸರು ಅಥವಾ ಸಂಸ್ಥೆಗಳ ಹೆಸರು ನೋಂದಾಯಿಸಲು ಅಲಂಕಾರ ಸಮಿತಿಯನ್ನು ಸಂಪರ್ಕಿಸಬಹುದು.
ಶಾರದಾ ಆಟ್ರ್ಸ್ ಅವರು ರಚಿಸಿದ ಕಟೀಲು ಕ್ಷೇತ್ರ ಮಹಾತ್ಮೆಯ ವರ್ಣಚಿತ್ರಗಳನ್ನು ಮುಂದಿನ ದಿನಗಳಲ್ಲಿ ಕಟೀಲು ರಥ ಬೀದಿಯಲ್ಲಿ ಅನಾವರಣಗೊಳಿಸಲಾಗುತ್ತದೆ.
