ವಿಟ್ಲ : ಜಿಲ್ಲಾಮಟ್ಟದ ಪ್ರಶಸ್ತಿ ವಿಜೇತೆ ಧನ್ಯಶ್ರೀ.ಬಿ. ಚಣಿಲ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ, ಧರ್ಮಸ್ಥಳ ಶಾಂತಿವನ ಟ್ರಸ್ಟ್, ‘ನೈತಿಕ ಶಿಕ್ಷಣ ಯೋಜನೆ’ಯನ್ವಯ ಆಯೋಜಿಸಿದ ‘ಜ್ಞಾನ ಮಂಜೂಷ’ ಪುಸ್ತಕಾಧಾರಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಇಲ್ಲಿಯ 7ನೇ ತರಗತಿ ವಿದ್ಯಾರ್ಥಿನಿ ಧನ್ಯಶ್ರೀ.ಬಿ.ಚಣಿಲ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಈಕೆಯು ಚಣಿಲ ತಿರುಮಲೇಶ್ವರ ಭಟ್ ಮತ್ತು ಹೇಮಾವತಿಯವರ ಪುತ್ರಿಯಾಗಿರುತ್ತಾಳೆ.

