ವಿಟ್ಲ : ಬೆಂಗಳೂರು ಸುಪ್ರಜಿತ್ ಫೌಂಡೇಶನ್ ವತಿಯಿಂದ ವಿಟ್ಲಡ ವಿಠಲ ಪ್ರೌಢ ಶಾಲಾ ಸಭಾ ಭವನದಲ್ಲಿ ವಿಠಲ ಸುಪ್ರಜಿತ್ ಐಟಿಐಯ ಮತ್ತು ಇತರ ಒಟ್ಟು 61 ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 3,74,000 ವಿದ್ಯಾರ್ಥಿ ವೇತನ ವಿತರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಸುಪ್ರಜಿತ್ ಎಂಜೀನೀಯರಿಂಗ್ ಲಿಮಿಟೆಡ್ ನ ಚಾರ್ಟೆಡ್ ಅಕೌಂಟೆಂಟ್ ಡೈರೆಕ್ಟರ್ ಜಯರಾಮ ಶೆಟ್ಟಿ ವಹಿಸಿದ್ದರು.

SHV_2939

SHV_2942

SHV_2943

ಮುಖ್ಯ ಅತಿಥಿಗಳಾಗಿ ತಮಕೂರು ಕಾಮರ್ಸ್ ಯೂನಿಯನ್ ಕ್ರಿಶ್ಟಿಯನ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಆರತಿ ಶೆಟ್ಟಿ, ವಿಠಲ ವಿದ್ಯಾ ಸಂಘದ ಸಂಚಾಲಕ ಎಲ್ ಎನ್ ಕೂಡೂರು ಮತ್ತು ವಿಠಲ ಸುಪ್ರಜಿತ್ ಐಟಿಐ ಸಂಚಾಲಕ ಸುಬ್ರಾಯ ಪೈ ಭಾಗವಹಿಸಿದ್ದರು.  ವಿಠಲ ಸುಪ್ರಜಿತ್ ಐಟಿಐ ಪ್ರಾಂಶುಪಾಲ ರಮೇಶ್ ರೈ ಸ್ವಾಗತಿಸಿದರು. ಚೈತನ್ಯಾ ಪ್ರಾರ್ಥಿಸಿದರು. ಸುಪ್ರಜಿತ್ ಸ್ಕಾಲರ್‍ಶಿಪ್ ಕಮಿಟಿ ಚೇರ್ಮನ್ ಅನಂತ ಕೃಷ್ಣ ಹೆಬ್ಬಾರ್ ಪ್ರಸ್ತಾವಿಸಿದರು. ಅನಿತಾ ಮತ್ತು ಮನೋಜ್ ಎಂ ಕೆ ವಿದ್ಯಾರ್ಥಿವೇತನ ಪಟ್ಟಿ ವಾಚಿಸಿದರು. ಹೇಮಂತ್ ಟಿ ಕೆ ವಂದಿಸಿದರು. ಮಮತಾ ಕೆ ಆರ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *