ಕೋಲಾರ: ಸುಳ್ಳು,ಅಪಪ್ರಚಾರ ಮಾಡಿ ದೇಶಕ್ಕೆ ಯಾರು ಬೆಂಕಿ ಹಚ್ಚುತ್ತಾರೋ ಅವರು ರಾಷ್ಟ್ರವಿರೋಧಿಗಳು ಎಂದು ಮಹಾತ್ಮಾಗಾಂಧೀಜಿಯವರೇ ಹೇಳಿದ್ದು, ಆ ಕೆಲಸವನ್ನು ಇಂದು ಕಾಂಗ್ರೆಸ್ಮಾ ಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ ಕಟೀಲ್ ಆರೋಪಿಸಿದರು. ಪೌರತ್ವ ತಿದ್ದುಪಡಿ ಕಾಯಿದೆ ಬೆಂಬಲಿಸಿ ನಗರದಲ್ಲಿ ಕರೆನೀಡಲಾಗಿದ್ದ ಬೃಹತ್ಜಾ ಗೃತಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಪಾಕ್,ಬಾಂಗ್ಲಾ,ಆಪ್ಘಾನಿಸ್ಥಾನಗಳಲ್ಲಿ ಆಕ್ರಮಣ,ಹಿಂಸೆಗೆ ತುತ್ತಾಗಿ ನಿರಾಶ್ರಿತರಾಗಿ ಬರುವವರಿಗೆ ಈ ದೇಶದ ಪೌರತ್ವ ನೀಡಬೇಕು ಎಂದು ಗಾಂಧೀಜಿಯವರೂ ಹೇಳಿದ್ದಾರೆ, ಸಂವಿಧಾನದಲ್ಲಿ ಅಂಬೇಡ್ಕರ್ಅ ವರೇ ಪ್ರತಿಪಾದಿಸಿದ್ದಾರೆ ಎಂದರು.
ಇಂತಹ ಗಾಂಧೀಜಿ,ಅಂಬೇಡ್ಕರ್ ಅವರ ಆಶಯವನ್ನು 2019 ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಈಡೇರಿಸಿದ್ದು,ಇದಕ್ಕೆ ಕಾರಣರಾದ ಪ್ರಧಾನಿ ನರೇಂದ್ರಮೋದಿ ಹಾಗೂ ಗೃಹ ಸಚಿವ ಅಮಿತ್‍ಷಾ ಸ್ವಾತಂತ್ರ್ಯದ ನಂತರ
ಅತಿದೊಡ್ಡ ತೀರ್ಮಾನ ಕೈಗೊಂಡಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಈ ಕಾಯಿದೆಯಿಂದ ಸುಮಾರು 3 ಕೋಟಿ ಮಂದಿಗೆ ಭಾರತದ ಪೌರತ್ವ ಸಿಗಲಿದ್ದು, ಇಲ್ಲಿನ ನಾಗರೀಕರಾಗಲಿದ್ದಾರೆ, ಇದು ಮೋದಿ ಮಾಡಿದ ಒಳ್ಳೆಯ ಕೆಲಸವಲ್ಲವೇ ಎಂದರು. ಕಾಂಗ್ರೆಸ್ ರಾಜಕೀಯಕ್ಕಾಗಿ ಸುಳ್ಳು ಸುದ್ದಿ ಹಬ್ಬಿಸಿ ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ, ಮತಬ್ಯಾಂಕ್ ರಾಜಕಾಣಕ್ಕಾಗಿ ಅಪಪ್ರಚಾರ ಮಾಡುತ್ತಿದ್ದು, ಈ ಕಾಯಿದೆ ಯಾವುದೇ ಧರ್ಮಿಯರ ಹಕ್ಕನ್ನು ಕಸಿಯುತ್ತಿಲ್ಲ, ಭಾರತದಲ್ಲಿ ಹುಟ್ಟಿದ ಯಾವೊಬ್ಬ ನಾಗರೀಕನಿಗೂ ಈ ಕಾಯಿದೆಯಿಂದ ತೊಂದರೆಯಿಲ್ಲ ಎಂದು ಸ್ವಷ್ಟಪಡಿಸಿದರು.
ಪಕ್ಕದ ರಾಷ್ರಗಳಲ್ಲಿ ಹಿಂಸೆಗೆ ತತ್ತರಿಸಿ ಬರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದು ಸಂವಿಧಾನ ವಿರೋಧಿಯಾದರೆ, ಹಿಂದೆ ಇವರಿಗೆ ಗಾಂಧಿ ಪೌರತ್ವ ನೀಡಬೇಕು ಎಂದಿದ್ದರು, ಇಂದಿರಾ ಗಾಂಧಿ ಬಾಂಗ್ಲಾ ನಿರಾಶ್ರಿತ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಪ್ರಸ್ತಾಪ ಮಾಡಿದ್ದರು, ಮನಮೋಹನ್ ಸಿಂಗ್ ಪೌರತ್ವ ಏಕೆ ನೀಡುತ್ತಿಲ್ಲ ಎಂದು ಸಂಸತ್ತಿನಲ್ಲಿ ಪ್ರಶ್ನಿಸಿದ್ದರು ಇವರೆಲ್ಲರೂ ಸಂವಿಧಾನ ವಿರೋಧಿಗಳಾ ಎಂದು ಪ್ರಶ್ನಿಸಿದರು. ಇಟಲಿ ಸೋನಿಯಾಗೆ
ಪೌರತ್ವ ನೀಡಲಾಗಿದೆ ಇಟಲಿಯಿಂದ ಬಂದ ಸೋನಿಯಾಗೆ ಪೌರತ್ವವನ್ನು ಈ ದೇಶದ ಕಾನೂನು ನೀಡಿದೆ, ಇನ್ನು ಪಾಕಿಸ್ತಾನ,ಬಾಂಗ್ಲಾ,ಆಪ್ಘಾನಿಸ್ತಾನಗಳಿಂದ ಕಿರುಕುಳಕ್ಕೆ ಒಳಗಾಗಿ ಜೀವ ಉಳಿಸಿಕೊಳ್ಳಲು ಬಂದ ಅಲ್ಪಸಂಖ್ಯಾತರಿಗೆ ಪೌರತ್ವ ಬೇಡ ಎನ್ನುವುದು ಯಾವ ನ್ಯಾಯ ಎಂದರು.
ಸ್ವಾತಂತ್ರ್ಯಹೋರಾಟಗಾರ ದೊರೆಸ್ವಾಮಿ ಟೀಕೆಗೆ ಉತ್ತರಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯಕ್ಕೆ ಬೆಲೆ ಇದೆ, ಬಿಜೆಪಿ ಮತ್ತು ಮೋದಿ ಪರ ಜನಾಭಿಪ್ರಾಯವಿದೆ, 2014 ರಿಂದ ಇಂದಿನವರೆಗೂ ಮೋದಿ ಸುಭದ್ರ, ಆಡಳಿತ ನೀಡಿದ್ದಾರೆ, ಭಾರತವನ್ನು ಇಡೀ ಜಗತ್ತು ಗುರುತಿಸುವಂತೆ ಮಾಡಿದ್ದಾರೆ ಎಂದರು. ಮೋದಿಯವರು ಗಟ್ಟಿ ತೀರ್ಮಾನ ಕೈಗೊಂಡಿದ್ದಾರೆ, ಜನತ್ತಿಗೆ ಭಾರತದ ಶಕ್ತಿ ತೋರಿಸಿದ್ದಾರೆ, ಜನಬೆಂಬಲ ಮೋದಿಗಿದೆ, ಕಾಂಗ್ರೆಸ್ ಅಪಪ್ರಚಾರ ನಿಲ್ಲಿಸಬೇಕು, ಪೌರತ್ವ ಕಾಯಿದೆಯಿಂದ ಈ ದೇಶದಲ್ಲಿ ಹುಟ್ಟಿದ ಯಾವ ಧರ್ಮಿಯರಿಗೂ ತೊಂದರೆಇಲ್ಲ ಎಂಬ ಸತ್ಯವನ್ನು ಸಮಾಜಕ್ಕೆ ತಿಳಿಸಬೇಕು ಎಂದು ತಾಕೀತು ಮಾಡಿದರು. ಸುದ್ದಿಗೋಷ್ಟಿಯಲ್ಲಿ ಸಚಿವ ಹೆಚ್.ನಾಗೇಶ್, ಎಂ.ಎಲ್‍ಸಿ ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸು, ರಾಜ್ಯ ಉಪಾಧ್ಯಕ್ಷ ಓಂಶಕ್ತಿ ಚಲಪತಿ, ಮುಖಂಡರಾದ ಎಸ್.ಬಿ.ಮುನಿವೆಂಕಟಪ್ಪ, ಮುರಳಿಗೌಡ, ಮಾಗೇರಿ ನಾರಾಯಣಸ್ವಾಮಿ ಮತ್ತಿತರರಿದ್ದರು.


