ಶ್ರೀನಿವಾಸಪುರ: ರೈತರ ಹೆಸರೇಳಿಕೊಂಡು ರಾಜಕಾರಣ ಮಾಡುವ ಸರ್ಕಾರಗಳು ವೈಜ್ಞಾನಿಕ ಬೆಲೆ ನಿಗದಿ ಮಾಡದೇ ರೈತನ ಬೆನ್ನೆಲಬು ಮುರಿದಿದ್ದರೆ, ಸರ್ಕಾರಿ ಗೋಮಾಳ ಕೆರೆ ಕುಂಟೆ ಜಮೀನುಗಳು ನಾಪತ್ತೆಯಾಗಿವೆ. ಹಳ್ಳಿಗಳಲ್ಲಿ ಸರ್ಕಾರಿ ಜಮೀನುಗಳನ್ನು ಉಳಿಸಬೇಕು. ಕೃಷಿ ಆದಾರಿತ ಕೈಗಾರಿಕೆಗಳನ್ನು ತೆರಯಬೇಕೆಂದು ತಾಲ್ಲೂಕು ಕಛೇರಿ ಮುಂದೆ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ತರಕಾರಿ ವಿತರಣೆ ಮಾಡುವ ಮೂಲಕ ಆಗ್ರಹಿಸಲಾಯಿತು. ರಾಜ್ಯ ಉಪಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೇ, ಗ್ರಾಮ ಪಂಚಾಯಿತಿಗಳ ಮುಂದೆ ಇಂದಿನಿಂದ ಜಿಲ್ಲೆಯಲ್ಲಿ ರೈತರ ಬಳಿ ಲಂಚ ಪಡೆಯದೇ ಕೆಲಸ ಮಾಡುತ್ತೇವೆಂದು ಹಾಗೂ ನಾವು ಲಂಚ ಪಡೆಯುವುದಿಲ್ಲ ಎಂದು ಕಚೇರಿಗಳ ಮುಂದೆ ನಾಮಪಲಕ ಹಾಕಲು ಸಾದ್ಯವಾಗುತ್ತದೆಯೇ? ಬಿತ್ತನೆ ಬೀಜದಿಂದ ರೈತನ ಬೆಳೆ ನಷ್ಟವಾದರೆ ನೂರೊಂದು ಕಾನೂನು ಕೇಳದೆ ಬೀಜ ಕಂಪನಿಯಿಂದ ತಕ್ಷಣ ರೈತರಿಗೆ ಪರಿಹಾರ ನೀಡಿಸಿ. ಬೀಜ ಮತ್ತು ಗೊಬ್ಬರ ಹಾಗೂ ಔಷಧಿಗಳಿಗೆ ರಸೀದಿ ನೀಡದ ಹಾಗೂ ಅಧಿಕ ಬೆಲೆಗೆ ಮಾರುವ ಅಂಗಡಿಯ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ.

ಕೃಷಿ ಇಲಾಖೆಗೆ ಬರುವ ಕಾಂಪೋಸ್ಟ್ ಹಾಗೂ ಜೈವಿಕ ಗೊಬ್ಬರಗಳ ಕಳಪೆ ಗುಣಮಟ್ಟ ಕೃಷಿ ಮತ್ತು ತೋಟಗಾರಿಕೆ, ರೇಷ್ಮೇ ಇಲಾಖೆಯಲ್ಲಿ ನೀಡುವ ಹನಿ ನೀರಾವರಿ, ಯಂತ್ರೋಪಕರಣಗಳು ಅತ್ಯಂತ ಕಳಪೆಯಾಗಿದ್ದು, ಇವುಗಳಿಗೆ ಕೊಡುವ ಸಹಾಯದನವನ್ನು ರೈತರಿಗೆ ನೀಡಿದರೇ ಇದೇ ಯಂತ್ರೋಪಕರಣಗಳು ಕಂಪನಿಗಳು ಯಂತ್ರಗಳಿಗಿಂತ ಗುಣಮಟ್ಟವಾಗಿದ್ದು, ಬೆಲೆಯು 50ರಷ್ಟು ರೈತನಿಗೆ ಉಳಿತಾಯವಾಗುತ್ತದೆ ಆದರೆ ಅಧಿಕಾರಿಗಳ ಕುಮ್ಮಕ್ಕಿನಿಂದ ನಡೆಯುತ್ತಿರುವ ಈ ಹಗಲು ಲೂಟಿಗೆ ಕಡಿವಾಣ ಹಾಕಿ ಗೋಮಾಳ ಜಮೀನುಗಳನ್ನು ಉಳಿಸಲು ಅಧಿಕಾರಿಗಳಿಗೇ ತಾಕತ್ತಿದೆಯೇ ಎಂದು ಸವಾಲಾಕಿದರು.

1svp3ep
ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ ದೇಶದಲ್ಲಿಯೇ ಅತಿ ಹೆಚ್ಚು ಬಂಡವಾಳ ಹೂಡುವ ಉದ್ದಿಮೆ ಕೃಷಿ ರಂಗವಾಗಿದ್ದು, ಅನ್ನ ಬೆಳೆಯುವ ರೈತರಿಗೆ ಮೈಗೆ ಬಟ್ಟೆಯಿಲ್ಲದೇ ಹೊಟ್ಟೆಗೆ ಊಟವಿಲ್ಲದೆ, ಬದುಕುವಂತಹ ಸ್ಥಿತಿ ನಮ್ಮನ್ನಾಳುವ ರಾಜಕಾರಣಿಗಳು ತಂದಿಟ್ಟು, ರೈತನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವುದು ನಾಚಿಕೆಗೇಡಾಗಿದೆ. 40 ªರ್ಷಗಳಿಂದ ಕೋಟಿಗಳ ಲೆಕ್ಕದಲ್ಲಿ ಲಾಭವಿದ್ದು, ಕೃಷಿ, ತೋಟಗಾರಿಕೆ ರೇಷ್ಮೇ ಇಲಾಖೆಗಳಲ್ಲಿ 10 ವರ್ಷಗಳಿಂದ ನೀಡಿರುವ ಎಲ್ಲಾ ಸಹಾಯದನದ ಅಂಕಿ ಅಂಶಗಳನ್ನು ಸ್ಥಳ ಪರೀಶೀಲನೆ ಮತ್ತು ಉನ್ನತ ಮಟ್ಟದ ತನಿಖೆ ಕೈಗೊಳ್ಳಬೇಕು.

ಕಂದಾಯ ಮತ್ತು ಸರ್ವೇ ಇಲಾಖೆ ಹೆಜ್ಜೆ ಹೆಜ್ಜೆಗೂ ಲಂಚದ ರೂಪದಲ್ಲಿ ರೈತನ ರಕ್ತ ಹೀರುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ವಿಮಾ ಸೌಲಭ್ಯ, ಬರ ಪರಿಹಾರ ಇವುಗಳ ಹಗಲು ದರೋಡೆ ಬಗ್ಗೆ ತನಿಖೆ ಆಗಬೇಕು. ಇಷ್ಟೇಲ್ಲಾ ಶೋಷಣೆಯೂ ರೈತರ ಪರ ರೈತರಿಗಾಗಿ ನಾವು ಎನ್ನುವ ಅಧಿಕಾರಿ ವ್ಯವಸ್ಥಯಲ್ಲಿಯೇ ರಾಜಾರೋಷವಾಗಿ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ತಮಗೆ ಸಾಧ್ಯವಿದ್ದರೇ, ಕಡಿವಾಣ ಹಾಕಬೇಕು, ಮೌನವಾಗಿರುವ ವ್ಯವಸ್ಥೆಗೆ ಆಕ್ರೋಶ ವ್ಯಕ್ತಪಡಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್‍ರವರು ನಿಮ್ಮ ಮನವಿಯಂತೆ ತಾಲ್ಲೂಕಿನಲ್ಲಿರುವ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಜೊತೆಗೆ ಸರ್ಕಾರಿ ಗೋಮಾಳ ಜಮೀನ್ನನು ಹಳ್ಳಿಗಳಲ್ಲಿ ಮೀಸಲಿಡಲು ಸರ್ಕಾರಕ್ಕೆ ಮನವಿ ಮಾಡುವ ಭರವಸೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್‍ಗೌಡ, ಮಹಿಳಾ ಜಿಲ್ಲಾಧ್ಯಕ್ಷೆ ನಳಿನಿ,ತಾ.ಅದ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ತೆರ್ನಹಳ್ಳಿ ವೆಂಕಿ, ಆಚಂಪಲ್ಲಿ ಗಂಗಾದರ್, ವಕ್ಕಲೇರಿ ಹನುಮಯ್ಯ, ಸಹದೇವಣ್ಣ, ಎಂ.ಹೊಸಹಳ್ಳಿ ಚಂದ್ರಪ್ಪ, ಸುಪ್ರೀಂ ಚಲ, ಸುಧಾಕರ್, ಮುರಳಿ, ವೆಂಕಟೇಶಪ್ಪ, ಪುತ್ತೇರಿ ರಾಜು, ಮುಂತಾದವರಿದ್ದರು.

By suddi9

Leave a Reply

Your email address will not be published. Required fields are marked *