ವಿಟ್ಲ :ಲಯನ್ಸ್ ಕ್ಲಬ್ ವತಿಯಿಂದ ನಡೆಯುವ `ಲಯನ್ಸ್ ಸಪ್ತಾ 2020′ ಇದರ ಉದ್ಘಾಟನೆಯನ್ನು ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ವಲಯಾಧ್ಯಕ್ಷ ಆನಂದ ರೈ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸ್ಕಿಲ್ ಡೆವೆಲೊಪ್ಮೆಂಟ್ ತರಬೇತಿಯನ್ನು ಸುಶ್ಮಿತಾ ನೀಡಿದರು.
ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಶೆಟ್ಟಿ ಪೆಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಲಯನ್ಸ್ ಕ್ಲಬ್ ಸದಸ್ಯರುಗಳಾದ ಪ್ರಭಾಕರ ಶೆಟ್ಟಿ, ಸದಾಶಿವ ಆಚಾರ್ಯ, ಇಕ್ಬಾಲ್ ಹೋನೆಸ್ಟ್ ಮತ್ತು ವಿನ್ನಿ ಮಸ್ಕರೇನಸ್ ಭಾಗವಹಿಸಿದ್ದರು.ಸದಸ್ಯ ರವಿಶಂಕರ್ ಸ್ವಾಗತಿಸಿದರು. ಸದಸ್ಯೆ ಜಲಜಾಕ್ಷಿ ನಿರೂಪಿಸಿ ವಂದಿಸಿದರು.
